Select Your Language

Notifications

webdunia
webdunia
webdunia
webdunia

IPL 2025: ಮುಂಬೈ ಇಂಡಿಯನ್ಸ್ ಗೆ ಇದೆಂಥಾ ಶಾಪ: 13 ವರ್ಷ ಕಳೆದರೂ ಮುಗಿಯದ ಅಪವಾದ

Mumbai Indians

Krishnaveni K

ಮುಂಬೈ , ಸೋಮವಾರ, 24 ಮಾರ್ಚ್ 2025 (09:51 IST)
ಮುಂಬೈ: ಐಪಿಎಲ್ 2025 ರಲ್ಲಿ ಮತ್ತೆ ಆರಂಭಿಕ ಪಂದ್ಯವನ್ನು ಮುಂಬೈ ಇಂಡಿಯನ್ಸ್ ಸೋತಿದೆ. ಈ ಮೂಲಕ 13 ವರ್ಷಗಳ ಶಾಪ ಹಾಗೆಯೇ ಉಳಿದುಕೊಂಡಂತಾಗಿದೆ.

ಮುಂಬೈ ಇಂಡಿಯನ್ಸ್ ತಂಡ ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲ ಪಂದ್ಯವನ್ನಾಡಿತ್ತು. ಈ ಪಂದ್ಯದಲ್ಲಿ 4 ವಿಕೆಟ್ ಗಳ ಸೋಲು ಅನುಭವಿಸಿದೆ. ಈ ಕೂಟದಲ್ಲಿ ಆಡಿದ ಮೊದಲ ಪಂದ್ಯವನ್ನೇ ಸೋತಿದೆ.

ಈ ಮೂಲಕ ಕೂಟದ ಮೊದಲ ಪಂದ್ಯವನ್ನೇ ಸೋಲುವ ಚಾಳಿಯನ್ನು ಮುಂದುವರಿಸಿತು. ಕಳೆದ 2013 ರಿಂದಲೂ ಮುಂಬೈ ಇಂಡಿಯನ್ಸ್ ಮೊದಲ ಪಂದ್ಯವನ್ನು ಸೋಲುತ್ತಾ ಬಂದಿದೆ. ಈ ಬಾರಿಯೂ ಮೊದಲ ಪಂದ್ಯವನ್ನು ಸೋತಿದೆ.  ಈ ಮೂಲಕ ತನ್ನ ಹಳೆಯ ಪರಂಪರೆ ಮುಂದುವರಿಸಿದೆ.

ನಿಷೇಧದ ಹಿನ್ನಲೆಯಲ್ಲಿ ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಯಾದವ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಹೊಸ ನಾಯಕನ ನೇತೃತ್ವದಲ್ಲಿ ಮೊದಲ ಪಂದ್ಯ ಗೆಲ್ಲಬಹುದು ಎಂಬ ವಿಶ್ವಾಸ ಅಭಿಮಾನಿಗಳಲ್ಲಿತ್ತು. ಆದರೆ ಈಗ ಅದು ಸುಳ್ಳಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IPL 2025: ಮುಂಬೈ ಇಂಡಿಯನ್ಸ್ ಮತ್ತೆ ರೋಹಿತ್ ಶರ್ಮಾರನ್ನು ಕಡೆಗಣಿಸಿತಾ, ವಿಡಿಯೋ ವೈರಲ್