ಕೋಲ್ಕತಾ: ಶನಿವಾರ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಪಿಎಲ್ 2025 ರ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ ಆರ್‌ಸಿಬಿ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಈ ಆವೃತ್ತಿಯನ್ನು ಗೆಲುವಿನ ನಗೆಯ ಮೂಲಕ ಆರ್‌ಸಿಬಿ ಆರಂಭಿಸಿದೆ.
ಟಾಸ್ ಗೆದ್ದ ಆರ್‌ಸಿಬಿ ಮೊದಲು ಫೀಲ್ಡಿಂಗ್ ಆಯ್ದುಕೊಂಡು ಕೆಕೆಆರ್ ಅನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಕೆಕೆಆರ್ 8ವಿಕೆಟ್ ಕಳೆದುಕೊಂಡು 174 ರನ್ ಗಳಿಸಿ, ಆರ್‌ಸಿಬಿಗೆ 175ರನ್‌ಗಳ ಟಾರ್ಗೆಟ್ ಅನ್ನು ನೀಡಿತು.
ಫಿಲ್ ಸಾಲ್ಟ್ ಹಾಗೂ ಕಿಂಗ್ ಕೊಹ್ಲಿಯ ಉತ್ತಮ ಆರಂಭ ನೀಡಿದರು. ಸಾಲ್ಟ್ 31ಎಸೆತದಲ್ಲಿ 56 ರನ್, ದೇವದತ್ ಪಾಡಿಕಲ್ 10ಎಸೆತಗಳಲ್ಲಿ 10ರನ್, ನಾಯಕ ರಜತ್ ಪಾಟಿದಾರ್ 16ಬಾಲ್‌ಗಳಲ್ಲಿ 34 ರನ್ ಹಾಗೂ ಕಿಂಗ್ ಕೊಹ್ಲಿ ನಾಟ್ ಔಟ್ ಆಗದೆ ಆಜೇಯವಾಗಿ ಉಳಿದು ಆರ್‌ಸಿಬಿ ಗೆಲುವಿಗೆ ಪ್ರಮುಖ ಪಾತ್ರರಾದರು.
ಈ ಮೂಲಕ ಆರ್‌ಸಿಬಿ 2025ರ ಆವೃತ್ತಿಯನ್ನು ಭರ್ಜರಿಯಾಗಿ ಆರಂಭಿಸಿದೆ.