ಕೋಲ್ಕತಾ: ಶನಿವಾರ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಪಿಎಲ್ 2025 ರ ಆರಂಭಿಕ ಪಂದ್ಯದಲ್ಲಿ 20ಓವರ್‌ಗಳಲ್ಲಿ ಕೆಕೆಆರ್ 8 ವಿಕೆಟ್ ಕಳೆದುಕೊಂಡು ಆರ್‌ಸಿಬಿಗೆ 175 ರನ್‌ಗಳ ಗೆಲುವಿನ ಟಾರ್ಗೇಟ್ ನೀಡಿತು.
ಟಾಸ್ ಗೆದ್ದ ಆರ್‌ಸಿಬಿ ಮೊದಲ ಫೀಲ್ಡಿಂಗ್ ಆಯ್ದುಕೊಂಡು ಕೆಕೆಆರ್ ಅನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.
ಸುನೀಲ್ ನರೇನಾ ಹಾಗೂ ಅಜಿಂಕ್ಯ ರಾಹನೆ ಜತೆಯಾಟದಲ್ಲಿ 57 ಎಸೆತಗಳಲ್ಲಿ 100 ರನ್‌ಗಳ ಕೊಡುಗೆಯನ್ನು ನೀಡಿದರು. ಆದರೆ ಆರ್‌ಸಿಬಿ ವಿರುದ್ಧ ವೆಂಕಟೇಶ್ ಅಯ್ಯರ್, ರಿಂಕು ಸಿಂಗ್ ಮತ್ತು ಆಂಡ್ರೆ ರಸೆಲ್ ಕಳಪೆಯಾಗಿ ಔಟಾದ ಕಾರಣ ಕೆಕೆಆರ್‌ನ ಸ್ಟಾರ್ ಆಟಗಾರರು ನಿರಾಶೆಗೊಂಡರು.
ನಾಯಕ ಅಜಿಂಕ್ಯ ರಹಾನೆ ಅರ್ಧಶತಕ (56) ಗಳಿಸಿದರೆ, ಸುನಿಲ್ ನರೈನ್ 44 ರನ್ ಗಳಿಸಿದರು. ಕೆಕೆಆರ್ 20 ಓವರ್‌ಗಳಲ್ಲಿ 8ವಿಕೆಟ್ ಕಳೆದುಕೊಂಡು 175ರನ್ ಗಳಿಸಿತು.
ಕೃನಾಲ್ ಪಾಂಡ್ಯ ಮೂರು ವಿಕೆಟ್ ಪಡೆದರು. ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಇಂದು ಆರ್‌ಸಿಬಿ ತಂಡದಲ್ಲಿಲ್ಲ. ಉದ್ಘಾಟನಾ ಸಮಾರಂಭದಲ್ಲಿ ವಿರಾಟ್ ಕೊಹ್ಲಿಯನ್ನು ಸನ್ಮಾನಿಸಲಾಯಿತು.