Select Your Language

Notifications

webdunia
webdunia
webdunia
Monday, 31 March 2025
webdunia

IPL 2025 RCB vs KKR: ಈ ಸಲ ಆರ್ ಸಿಬಿ ಚಾಂಪಿಯನ್ ಆಗಬಹುದು ಎನ್ನುವುದಕ್ಕೆ ಮೂರು ಕಾರಣ

RCB

Krishnaveni K

ಬೆಂಗಳೂರು , ಶನಿವಾರ, 22 ಮಾರ್ಚ್ 2025 (12:47 IST)
ಬೆಂಗಳೂರು: ಐಪಿಎಲ್ 2025 ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಇಂದು ಮೊದಲ ಪಂದ್ಯದಲ್ಲೇ ಆರ್ ಸಿಬಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಈ ಸಲ ಆರ್ ಸಿಬಿ ಕಪ್ ಗೆಲ್ಲಬಹುದು ಎನ್ನುವುದಕ್ಕೆ ಮೂರು ಕಾರಣಗಳು ಇಲ್ಲಿವೆ ನೋಡಿ.

ನಾಯಕತ್ವ ಬದಲಾವಣೆ
ಇಷ್ಟು ದಿನ ಆರ್ ಸಿಬಿ ಹಿರಿಯ ಅನುಭವಿಗಳಿಗೇ ನಾಯಕತ್ವ ನೀಡಿತ್ತು. ಇದೀಗ ಯುವ, ಉತ್ಸಾಹೀ ನಾಯಕನನ್ನು ಆಯ್ಕೆ ಮಾಡಿದೆ. ರಜತ್ ಪಾಟೀದಾರ್ ನಾಯಕರಾಗಿ ಹೆಚ್ಚು ಅನುಭವವಿಲ್ಲದೇ ಇರಬಹುದು. ಆದರೆ ಐಪಿಎಲ್ ನಲ್ಲಿ ಯುವ ನಾಯಕರು ಮಿಂಚಿದ ಹಲವು ಉದಾಹರಣೆಗಳಿವೆ. ಹೀಗಾಗಿ ರಜತ್ ಮೇಲೂ ವಿಶ್ವಾಸವಿದೆ.

ಆಲ್ ರೌಂಡರ್ ಗಳ ಬಲ
ಈ ಬಾರಿ ಆರ್ ಸಿಬಿ ತಂಡದಲ್ಲಿ ಸಾಕಷ್ಟು ಆಲ್ ರೌಂಡರ್ ಗಳಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ ಆಲ್ ರೌಂಡರ್ ಗಳೇ ಹೆಚ್ಚು ಉಪಯುಕ್ತವಾಗುತ್ತಾರೆ. ಹೀಗಾಗಿ ಈ ಬಾರಿ ಕೃನಾಲ್ ಪಾಂಡ್ಯ, ಲಿವಿಂಗ್ ಸ್ಟೋನ್, ಮೋಹಿತ್ ರಾಠೀ, ಸ್ವಪ್ನಿಲ್ ಸಿಂಗ್ ಸೇರಿದಂತೆ ಈ ಮಾದರಿಗೆ ಹೇಳಿ ಮಾಡಿಸಿದ ಆಲ್ ರೌಂಡರ್ ಗಳಿದ್ದಾರೆ.

ವಿರಾಟ್ ಕೊಹ್ಲಿ ಛಲ
ಕಳೆದ 17 ಸೀಸನ್ ಗಳಲ್ಲಿ ಆಡಿಯೂ ಆರ್ ಸಿಬಿಗೆ ಒಂದು ಕಪ್ ಗೆದ್ದುಕೊಡಲು ಸಾಧ್ಯವಾಗಿಲ್ಲ ಎನ್ನುವ ಬೇಸರ ವಿರಾಟ್ ಕೊಹ್ಲಿಯಲ್ಲಿದೆ. ಈ ಬಾರಿ ರಜತ್ ನಾಯಕತ್ವದಲ್ಲಿ ಕಪ್ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಜೊತೆಗೆ ಮುಂದೆ ಅವರು ಐಪಿಎಲ್ ಅಡುತ್ತಾರೋ ಇಲ್ಲವೋ ಗೊತ್ತಿಲ್ಲ. ಹೀಗಾಗಿ ಈ ಬಾರಿಯಾದರೂ ಕಪ್ ಗೆದ್ದು ಕೊಡುತ್ತಾರೆ ಎಂಬ ವಿಶ್ವಾಸವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2025 ಕ್ಕೆ ಇಂದಿನಿಂದ ಚಾಲನೆ: ಆರ್ ಸಿಬಿ ವರ್ಸಸ್ ಕೋಲ್ಕತ್ತಾ ಮೊದಲ ಪಂದ್ಯಕ್ಕೇ ಆತಂಕ