Select Your Language

Notifications

webdunia
webdunia
webdunia
webdunia

IPL 2025: ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ದಿಡೀರ್ ಚೇಂಜ್: ಸೂರ್ಯಕುಮಾರ್ ಯಾದವ್ ಗೆ ಪಟ್ಟ

Suryakumar Yadav

Krishnaveni K

ಮುಂಬೈ , ಬುಧವಾರ, 19 ಮಾರ್ಚ್ 2025 (14:14 IST)
Photo Credit: X
ಮುಂಬೈ: ಐಪಿಎಲ್ 2025 ಆರಂಭಕ್ಕೆ ಕೆಲವೇ ನಿಮಿಷಗಳ ಮೊದಲು ಮುಂಬೈ ಇಂಡಿಯನ್ಸ್ ತಂಡ ತನ್ನ ಹೊಸ ನಾಯಕನ ಘೋಷಣೆ ಮಾಡಿದೆ. ಸೂರ್ಯಕುಮಾರ್ ಮುಂಬೈ ತಂಡದ ನಾಯಕರಾಗಲಿದ್ದಾರೆ. ಈ ದಿಡೀರ್ ಬದಲಾವಣೆಗೆ ಕಾರಣವೇನು ನೋಡಿ.
 

ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾ ಟಿ20 ತಂಡದ ನಾಯಕರಾಗಿ ಸಾಕಷ್ಟು ಯಶಸ್ಸು ಗಳಿಸಿದ್ದಾರೆ. ಇದೀಗ ಅವರನ್ನು ಏಕಾಏಕಿ ಮುಂಬೈ ಫ್ರಾಂಚೈಸಿ ನಾಯಕ ಎಂದು ಘೋಷಣೆ ಮಾಡಿದೆ. ಆದರೆ ಇಲ್ಲೇ ಇರುವುದು ಟ್ವಿಸ್ಟ್.

ಸೂರ್ಯ ಮೊದಲ ಪಂದ್ಯಕ್ಕೆ ಮಾತ್ರ ನಾಯಕರಾಗಲಿದ್ದಾರೆ. ಖಾಯಂ ನಾಯಕ ಹಾರ್ದಿಕ್ ಪಾಂಡ್ಯಗೆ ನಿಧಾನಗತಿಯ ಓವರ್ ಕಾರಣಕ್ಕೆ ಒಂದು ಪಂದ್ಯದ ನಿಷೇಧ ಶಿಕ್ಷೆಯಿದೆ. ಈ ಕಾರಣಕ್ಕೆ ಸಿಎಸ್ ಕೆ ವಿರುದ್ಧದ ಮೊದಲ ಪಂದ್ಯಕ್ಕೆ ಸೂರ್ಯಕುಮಾರ್ ನಾಯಕರಾಗಲಿದ್ದಾರೆ.

ಮುಂಬೈ ಇಂತಹದ್ದೊಂದು ಪ್ರಕಟಣೆ ನೀಡುತ್ತಿದ್ದಂತೇ ಕೇವಲ ಒಂದು ಪಂದ್ಯ ಯಾಕೆ, ಇಡೀ ಸೀಸನ್ ಗೇ ಸೂರ್ಯಕುಮಾರ್ ರನ್ನು ನಾಯಕರಾಗಿ ನೇಮಿಸಿ. ಹೇಗಿದ್ದರೂ ಅವರು ಟೀಂ ಇಂಡಿಯಾ ನಾಯಕರಾಗಿ ಯಶಸ್ವಿಯಾಗಿದ್ದಾರೆ. ಮುಂಬೈ ತಂಡಕ್ಕೂ ಅವರೇ ಖಾಯಂ ನಾಯಕರಾಗಲಿ ಎಂದು ಆಗ್ರಹಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

IPL 2025: ಆರ್ ಸಿಬಿಯಲ್ಲಿ ಈ ಬಾರಿ ಈ ಸಲ ಕಪ್ ನಮ್ದೇ ಘೋಷಣೆ ಕೇಳಿಸಲ್ಲ: ಎಲ್ಲದಕ್ಕೂ ಕೊಹ್ಲಿಯೇ ಕಾರಣ