Select Your Language

Notifications

webdunia
webdunia
webdunia
webdunia

ಪಾಕ್ ಅಭಿಮಾನಿ ಜತೆಗಿನ ಸೂರ್ಯಕುಮಾರ್ ಯಾದವ್ ನಡವಳಿಕೆಗೆ ನೆಟ್ಟಿಗರು ಫಿದಾ, ವಿಡಿಯೋ

ಪಾಕ್ ಅಭಿಮಾನಿ ಜತೆಗಿನ ಸೂರ್ಯಕುಮಾರ್ ಯಾದವ್ ನಡವಳಿಕೆಗೆ ನೆಟ್ಟಿಗರು ಫಿದಾ, ವಿಡಿಯೋ

Sampriya

ದುಬೈ , ಸೋಮವಾರ, 24 ಫೆಬ್ರವರಿ 2025 (15:59 IST)
Photo Courtesy X
ದುಬೈ:  ನಿನ್ನೆ ದುಬೈ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ ಹಾಗೂ ಭಾರತ ನಡುವಿನ ಐಸಿಸಿ ಚಾಂಪಿಯನ್ ಟ್ರೋಫಿ ಹೈವೋಲ್ಟೇಜ್ ಪಂದ್ಯಾಟವನ್ನು ನೋಡಲು ಭಾರತದ T20I ನಾಯಕ ಸೂರ್ಯಕುಮಾರ್ ಯಾದವ್ ಅವರು ಬಂದಿದ್ದರು. ಪತ್ನಿ ದೇವಿಶಾ ಶೆಟ್ಟಿ ಜತೆಗೆ ಪಂದ್ಯಾಟವನ್ನು ನೋಡಿ, ಹುರಿದುಂಬಿಸಿದರು.

ಸ್ಟೇಡಿಯಂನಲ್ಲಿ ಕುಳಿತಿದ್ದ ಸೂರ್ಯಕುಮಾರ್ ಯಾದವ್ ಅವರನ್ನು  ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಯೊಬ್ಬರು ಮಾತನಾಡಿಸಿ, ಸೆಲ್ಫಿ ನೀಡುವಂತೆ ಕೇಳಿಕೊಂಡಿದ್ದಾರೆ.  ಈ ವೇಳೆ ಸೂರ್ಯಕುಮಾರ್ ಅವರು ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾದವ್ ಪತ್ನಿ ದೇವಿಶಾ ಶೆಟ್ಟಿಯೊಂದಿಗೆ ಕಾಣಿಸಿಕೊಂಡಿದ್ದು, ಇಬ್ಬರು ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳು ಅವರ ಮುಂಭಾಗದಲ್ಲಿ ಕುಳಿತಿದ್ದರು. ಈ ವೇಳೆ ಮಹಿಳಾ ಅಭಿಮಾನಿ ಅವರಲ್ಲಿ ಸೆಲ್ಫಿ ನೀಡುವಂತೆ ಕೇಳಿಕೊಂಡಿದ್ದಾರೆ.

ಈ ಕ್ಷಣವನ್ನು ಅಲ್ಲೇ ಇದ್ದ ಕ್ರಿಕೆಟ್ ಅಭಿಮಾನಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಾಸ್‌ ಗೆದ್ದ ನ್ಯೂಜಿಲೆಂಡ್‌ ಫೀಲ್ಡಿಂಗ್‌ ಆಯ್ಕೆ: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪುಟಿದೇಳುವುದೇ ಬಾಂಗ್ಲಾ