ಬೆಂಗಳೂರು: ರಾಜಕೀಯ ಜಂಜಾಟಕ್ಕೆ ಬ್ರೇಕ್ ನೀಡಿ ಸಚಿವ ಜಮೀರ್ ಅಹ್ಮದ್ ಅವರು ತಮ್ಮ ಮೊಮ್ಮಗಳ ಜತೆ ಜಾಲಿ ರೈಡ್ ಮಾಡಿದ್ದಾರೆ.
ಪುಟಾಣಿ ಬೈಕ್ ಏರಿದ ಜಮೀರ್ ಅಹ್ಮದ್ ಅವರು ತಮ್ಮ ಮೊಮ್ಮಗಳನ್ನು ಕೂರಿಸಿಕೊಂಡು ಮನೆಯಲ್ಲಿ ಸುತ್ತಾಡಿದ್ದಾರೆ. ಈ ವಿಡಿಯೋವನ್ನು ಜಮೀರ್ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶೇರ್ ಮಾಡಿದ್ದಾರೆ.
ಒಟ್ಟಾರೆ ಜಮೀರ್ ಅವರು ರಾಜ್ಯ ರಾಜಕೀಯದಿಂದ ಕೊಂಚ ಬ್ರೇಕ್ ಪಡೆದು ಮೊಮ್ಮಗಳ ಜತೆ ಆಟವಾಡಿ ರಿಲ್ಯಾಕ್ಷ್ ಆಗುತ್ತಿದ್ದಾರೆ. ಇದನ್ನು ನೋಡಿದವರು ಸಾಕಷ್ಟು ಮಂದಿ ಜಮೀರ್ ಮಗು ಮನಸ್ಸಿಗೆ ಫಿದಾ ಆಗಿ, ಕಮೆಂಟ್ ಮಾಡುತ್ತಿದ್ದಾರೆ.
ಮತ್ತೇ ಕೆಲವರು ಈ ವಿಡಿಯೋಗೆ ಹಿಂದಿ ಹಾಡು ಹಾಕುವ ಬದಲು, ಕನ್ನಡ ಹಾಡು ಹಾಕಬಾರದಿತ್ತೆ ಎಂದು ಪ್ರಶ್ನೆ ಮಾಡಿದ್ದಾರೆ. ಕರ್ನಾಟಕದ ಶಾಸಕನಾಗಿ ಕನ್ನಡ ಹಾಡು ಹಾಕುವುದಲ್ವಾ ಎಂದು ಕಾಲೆಳೆದಿದ್ದಾರೆ.
ಮತ್ತೊಬ್ಬರು ಹೆಲ್ಮೆಟ್ ಎಲ್ಲಿ ಎಂದು ತಮಾಷೆ ಮಾಡಿದ್ದಾರೆ.