Select Your Language

Notifications

webdunia
webdunia
webdunia
webdunia

ಸಚಿವ ಜಮೀರ್ ಅಹ್ಮದ್ ಪುತ್ರ, ಕಲ್ಟ್ ಸಿನಿಮಾ ಹೀರೋ ಜೈದ್ ಖಾನ್ ವಿರುದ್ಧ ದೂರು

Zaid Khan

Krishnaveni K

ಬೆಂಗಳೂರು , ಶನಿವಾರ, 30 ನವೆಂಬರ್ 2024 (11:12 IST)
ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಪುತ್ರ, ಕಲ್ಟ್ ಸಿನಿಮಾದ ಹೀರೋ ಕಮ್ ನಿರ್ಮಾಪಕ ಜೈದ್ ಖಾನ್ ವಿರುದ್ಧ ವಂಚನೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಕೇಳಿಬಂದಿದ್ದು ದೂರು ದಾಖಲಾಗಿದೆ.

ಜೈದ್ ಖಾನ್ ನಿರ್ಮಿಸಿ ನಟಿಸುತ್ತಿರುವ ಕಲ್ಟ್ ಸಿನಿಮಾದಲ್ಲಿ ಡ್ರೋಣ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದಕ್ಕೆ ಕಾರಣ ಕಲ್ಟ್ ಸಿನಿಮಾ ತಂಡ ನೀಡಿದ ಕಿರುಕುಳ ಎಂಬ ಆರೋಪ ಕೇಳಿಬಂದಿದೆ. ಸಾಲ ಸೋಲ ಮಾಡಿ ಖರೀದಿಸಿದ್ದ ಡ್ರೋಣ್ ಹಾಳು ಮಾಡಿದ್ದಲ್ಲದೆ, ಪರಿಹಾರವೂ ಕೊಡದೇ ಚಿತ್ರತಂಡ ಸತಾಯಿಸಿತ್ತು. ಈ ಕಾರಣಕ್ಕೆ ಮನನೊಂದು ಡ್ರೋಣ್ ಟೆಕ್ನಿಷಿಯನ್ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಈ ಸಂಬಂಧ ಜೈದ್ ಖಾನ್ ವಿರುದ್ಧ ದೂರು ದಾಖಲಾಗಿದೆ. ಸಿನಿಮಾಗಳಿಗೆ ಡ್ರೋಣ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುವ ಸಂತೋಷ್ ತನ್ನ ಕೆಲಸಕ್ಕೆ ದಿನಕ್ಕೆ 25 ಸಾವಿರ ರೂ. ಸಂಭಾವನೆ ಪಡೆಯುತ್ತಿದ್ದ. ಸಿನಿಮಾ  ಚಿತ್ರೀಕರಣಕ್ಕೆಂದೇ ಸಂತೋಷ್ ಸಾಲ ಸೋಲ ಮಾಡಿ 25 ಲಕ್ಷ ರೂ. ಕೊಟ್ಟು ಡ್ರೋಣ್ ಖರೀದಿ ಮಾಡಿಟ್ಟುಕೊಂಡಿದ್ದ.

ಅದೇ ರೀತಿ ಕಲ್ಟ್ ಸಿನಿಮಾಗೂ ಸಂತೋಷ್ ಡ್ರೋಣ್ ಬಳಕೆ ಮಾಡಲಾಗಿದೆ. ತುಂಬಾ ರಿಸ್ಕಿ ಶಾಟ್ ಡ್ರೋಣ್ ಗೆ ಹಾನಿಯಾಗಬಹುದು ಎಂದರೂ ಕೇಳದೇ ಚಿತ್ರತಂಡ ಚಿತ್ರೀಕರಣಕ್ಕೆ ಮುಂದಾಗಿದೆ. ಈ ವೇಳೆ ಡ್ರೋಣ್ ಗೆ ಹಾನಿಯಾಗಿದೆ. ಇದರ ನಷ್ಟ ಪರಿಹಾರ ಕೇಳಲು ಬಂದರೆ ಜೈದ್ ಖಾನ್ ಮತ್ತು ಚಿತ್ರತಂಡ ಖಾಲಿ ಪೇಪರ್ ಮೇಲೆ ಸಹಿ ಹಾಕಿಸಿ ಆಧಾರ್ ನಂಬರ್ ಪಡೆದು ಅವಮಾನ ಮಾಡಿದೆ. ಇದರಿಂದ ಮನನೊಂದು ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಸಂಬಂಧ ದೂರು ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಿರುಪತಿ ಸನ್ನಿಧಿಯಲ್ಲಿ ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ಕೀರ್ತಿ ಸುರೇಶ್‌