ಮುಂಬೈ: ಇಷ್ಟು ದಿನ ಮುಂಬೈ ಕಾ ರಾಜ ಎಂದು ಕರೆಯುತ್ತಿದ್ದ ಅದೇ ಫ್ಯಾನ್ಸ್ ರೋಹಿತ್ ಶರ್ಮಾರನ್ನು ವಡಾಪಾವ್ ಎಂದು ಹೀಯಾಳಿಸಿದರೆ ಹೇಗಾಗಬೇಡ. ನಿನ್ನೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತೆ ಕಳಪೆ ಮೊತ್ತಕ್ಕೆ ಔಟಾದಾಗ ಪ್ರೇಕ್ಷಕರು ಅವರನ್ನು ವಡಾಪಾವ್ ಎಂದು ಮೂದಲಿಸಿದ್ದಾರೆ.
ನಿನ್ನೆಯ ಪಂದ್ಯವನ್ನು ಮುಂಬೈ ಇಂಡಿಯನ್ಸ್ 8 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 16.2 ಓವರ್ ಗಳಲ್ಲಿ 116 ವಿಕೆಟ್ ಗೆ ಆಲೌಟ್ ಆಗಿತ್ತು. ಮುಂಬೈ ಪರ ಯುವ ವೇಗಿ ಅಶ್ವನಿ ಕುಮಾರ್ 4 ವಿಕೆಟ್ ಕಬಳಿಸಿ ಮಿಂಚಿದರು.
ಬಳಿಕ ಬ್ಯಾಟಿಂಗ್ ಮಾಡಿದ ಮುಂಬೈ 12.5 ಓವರ್ ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿ ಗೆಲುವು ತನ್ನದಾಗಿಸಿತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ 12 ಎಸೆತಗಳಿಂದ 1 ಸಿಕ್ಸರ್ ಸೇರಿದಂತೆ 13 ರನ್ ಗಳಿಸಿ ಔಟಾದರು. ಮತ್ತೆ ಅವರು ವಿಫಲರಾಗಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು.
ಇದೇ ಕಾರಣಕ್ಕೆ ಮೈದಾನಲ್ಲಿದ್ದ ಕೆಲವು ಪ್ರೇಕ್ಷಕರ ಗುಂಪು ವಡಾಪಾವ್ ಎಂದು ರೋಹಿತ್ ರನ್ನು ಹೀಯಾಳಿಸಿದ್ದಾರೆ. ತಮ್ಮ ತವರಿನಲ್ಲೇ ರೋಹಿತ್ ಗೆ ಈ ರೀತಿ ಅವಮಾನವಾಗಿದ್ದು ವಿಪರ್ಯಾಸ.