ಗುವಾಹಟಿ: ಸಂಜು ಸ್ಯಾಮ್ಸನ್ ಗೈರಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿರುವ ರಿಯಾಗ್ ಪರಾಗ್ ವರ್ತನೆ ಈಗ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ವಿಡಿಯೋವೊಂದು ಇಲ್ಲಿದೆ ನೋಡಿ.
ರಿಯಾನ್ ಪರಾಗ್ ರಾಜಸ್ಥಾನ್ ತಂಡದ ಪ್ರಮುಖ ಆಟಗಾರ. ಸಂಜು ಸ್ಯಾಮ್ಸನ್ ಗೈರಿನಲ್ಲಿ ತಂಡದ ನಾಯಕರಾಗಿದ್ದಾರೆ. ನಿನ್ನೆ ಸಿಎಸ್ ಕೆ ವಿರುದ್ಧ ಪಂದ್ಯ ಗೆದ್ದ ಬಳಿಕ ರಿಯಾನ್ ಪರಾಗ್ ಮೈದಾನದಲ್ಲಿದ್ದ ಸಿಬ್ಬಂದಿಗಳ ಜೊತೆ ನಡೆದುಕೊಂಡ ರೀತಿ ಈಗ ಆಕ್ರೋಶಕ್ಕೆ ಕಾರಣವಾಗಿದೆ.
ಸಿಬ್ಬಂದಿಗಳ ಗುಂಪೊಂದು ರಿಯಾನ್ ಪರಾಗ್ ಬಳಿ ಸೆಲ್ಫೀ ತೆಗೆಸಿಕೊಳ್ಳಲು ಫೋನ್ ನೀಡುತ್ತಾರೆ. ಅವರ ಕಡೆಗೆ ದುರುಗುಟ್ಟಿ ನೋಡಿ ಸರಿಯಾಗಿ ಪೋಸ್ ಕೊಡಿ ಎನ್ನುವ ರಿಯಾನ್ ಪರಾಗ್ ಬಳಿಕ ಬೇಕೋ ಬೇಡವೋ ಎಂಬಂತೆ ಸ್ಮೈಲ್ ಮಾಡಿ ತಾವೇ ಫೋಟೋ ಕ್ಲಿಕ್ಕಿಸುತ್ತಾರೆ.
ಫೋಟೋ ತೆಗೆದ ಬಳಿಕ ಪಕ್ಕದಲ್ಲೇ ಇದ್ದರೂ ಸಿಬ್ಬಂದಿಗೆ ಮೊಬೈಲ್ ಎಸೆಯುತ್ತಾರೆ. ಅವರ ಈ ವರ್ತನೆ ನೋಡಿದ ನೆಟ್ಟಿಗರು ಚಿಕ್ಕವಯಸ್ಸಿನಲ್ಲೇ ನಾಯಕತ್ವ, ಖ್ಯಾತಿ ಸಿಕ್ಕಿದರೆ ಹೀಗೇ ಆಗೋದು, ದುರಹಂಕಾರ ಎಂದು ಕಿಡಿ ಕಾರಿದ್ದಾರೆ.