Select Your Language

Notifications

webdunia
webdunia
webdunia
webdunia

Rohit Sharma: ರೋಹಿತ್ ಶರ್ಮಾ ಕಾಲು ಹಿಡಿದ ಬಾಲ್ ಬಾಯ್: ಹಿಟ್ ಮ್ಯಾನ್ ರಿಯಾಕ್ಷನ್ ವಿಡಿಯೋ ನೋಡಿ

Rohit Sharma ball boy

Krishnaveni K

ಜೈಪುರ , ಶುಕ್ರವಾರ, 2 ಮೇ 2025 (09:41 IST)
Photo Credit: X
ಜೈಪುರ: ರಾಜಸ್ಥಾನ್ ರಾಯಲ್ಸ್ ವಿರುದ್ಧ ನಿನ್ನೆ ಐಪಿಎಲ್ ಪಂದ್ಯ ಮುಗಿದ ಬಳಿಕ ಮುಂಬೈ ಇಂಡಿಯನ್ಸ್ ಹಿರಿಯ ಆಟಗಾರ ರೋಹಿತ್ ಶರ್ಮಾರನ್ನು ಬಾಲ್ ಬಾಯ್ ಒಬ್ಬಾತ ಬಂದು ಕಾಲು ಮುಟ್ಟಿ ನಮಸ್ಕರಿಸಿದ ಘಟನೆ ನಡೆದಿದೆ. ಇದಕ್ಕೆ ರೋಹಿತ್ ರಿಯಾಕ್ಷನ್ ವಿಡಿಯೋ ವೈರಲ್ ಆಗಿದೆ.

ರಾಜಸ್ಥಾನ್ ವಿರುದ್ಧದ ಪಂದ್ಯವನ್ನು ಮುಂಬೈ 100 ರನ್ ಗಳಿಂದ ಗೆದ್ದುಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 2 ವಿಕೆಟ್ ನಷ್ಟಕ್ಕೆ 217 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಆದರೆ ರಾಜಸ್ಥಾನ್ 117 ರನ್ ಗಳಿಗೆ ಆಲೌಟ್ ಆಯಿತು.

ಈ ಪಂದ್ಯದಲ್ಲಿ ರೋಹಿತ್ ಶರ್ಮಾ 36 ಎಸೆತದಿಂದ 9 ಬೌಂಡರಿ ಒಳಗೊಂಡಂತೆ 53 ರನ್ ಸಿಡಿಸಿದ್ದರು. ಗೆಲುವಿನ ಬಳಿಕ ರೋಹಿತ್ ಬೌಂಡರಿ ಲೈನ್ ಬಳಿ ನಿಂತಿದ್ದಾಗ ಬಾಲ್ ಬಾಯ್ ಹತ್ತಿರ ಬಂದು ಸೀದಾ ರೋಹಿತ್ ಪಾದ ಮುಟ್ಟಿ ನಮಸ್ಕರಿಸಿದ್ದಾರೆ.

ಮೊದಲು ತನ್ನ ಕೈಕುಲುಕಿದ  ಹುಡುಗ ಸೀದಾ ತನ್ನ ಕಾಲಿಗೆ ಬಿದ್ದಾಗ ರೋಹಿತ್ ಗಲಿಬಿಲಿಯಾದರು. ತಕ್ಷಣವೇ ಸಾವರಿಸಿಕೊಂಡು ಆತನನ್ನು ಹಿಡಿದೆತ್ತಿ ಬೆನ್ನು ತಟ್ಟಿ ಕಳುಹಿಸಿಕೊಟ್ಟರು. ಈ  ವಿಡಿಯೋ ವೈರಲ್ ಆಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

Rohit Sharma: ರೋಹಿತ್ ಶರ್ಮಾ, ಮುಂಬೈ ಇಂಡಿಯನ್ಸ್ ಗೆ ಡಿಆರ್ ಎಸ್ ನಿಯಮವೇ ಬೇರೇನಾ: ವಿಡಿಯೋ ನೋಡಿ ಡಿಸೈಡ್ ಮಾಡಿ