ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ಮಗಳ ಜೊತೆ ಪಪ್ಪಾರಾಜಿಗಳು ನಡೆದುಕೊಂಡ ರೀತಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಸಿಟ್ಟೆಗೆದ್ದ ಘಟನೆಯೊಂದು ನಡೆದಿದೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ರೋಹಿತ್ ಶರ್ಮಾ ತಮ್ಮ ಪತ್ನಿ ಮಕ್ಕಳೊಂದಿಗೆ ನೇರವಾಗಿ ಮಾಲ್ಡೀವ್ಸ್ ನಲ್ಲಿ ಕೆಲವು ದಿನ ಹಾಲಿಡೇಗೆ ತೆರಳಿದ್ದರು. ಇದೀಗ ಐಪಿಎಲ್ ನಲ್ಲಿ ಭಾಗಿಯಾಗಲು ಅವರು ಮುಂಬೈ ವಿಮಾನ ನಿಲ್ದಾಣದಕ್ಕೆ ಬಂದಿಳಿದಿದ್ದಾರೆ.
ರೋಹಿತ್ ಮಗಳ ಕೈ ಹಿಡಿದುಕೊಂಡು ಬರುತ್ತಿರುವಾಗ ಪಪ್ಪಾರಾಜಿಗಳು ಒಂದೇ ಸಮನೆ ಫೋಟೋ ಕ್ಲಿಕ್ಕಿಸುತ್ತಿದ್ದರು. ಇದರಿಂದ ಕೊಂಚ ಕಿರಿ ಕಿರಿಯಾದ ಪುತ್ರಿ ಸಮೈರಾ ತಂದೆಯ ಹಿಂದೆ ಅವಿತುಕೊಂಡಳು. ಇದನ್ನು ಅರಿತ ರೋಹಿತ್ ಕೈ ಸನ್ನೆಯಿಂದಲೇ ಫೋಟೋ ತೆಗೆಯಬೇಡಿ ಎಂದರು. ಆದರೂ ಕೆಲವರು ಫೋಟೋ ತೆಗೆಯುತ್ತಲೇ ಇದ್ದರು. ಆಗ ಕೊಂಚ ಅಸಮಾಧಾನಗೊಂಡ ರೋಹಿತ್ ಮಗಳನ್ನು ತಮ್ಮ ಬೆನ್ನ ಹಿಂದೆ ಅಡಗಿಸಿಕೊಂಡು ಹೇಗೋ ಕಾರಿನೊಳಗೆ ಆಕೆಯನ್ನು ಕೂರಿಸಿದರು.
ಬಳಿಕ ಅಲ್ಲಿದ್ದ ಕೆಲವರು ರೋಹಿತ್ ಬಳಿ ಸೆಲ್ಫೀಗೆ ಮನವಿ ಮಾಡಿದರು. ಅವರಿಗೂ ನಿರಾಸೆ ಮಾಡದೇ ರೋಹಿತ್ ಫೋಟೋಗೆ ಪೋಸ್ ನೀಡಿ ತೆರಳಿದರು.