ದುಬೈ: ನ್ಯೂಜಿಲೆಂಡ್ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಕೊನೆಯ ಲೀಗ್ ಪಂದ್ಯದ ಟಾಸ್ ವೇಳೆ ಎದುರು ನಿಂತಿದ್ದ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಗೆ ಹೋಗಲೋ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೈ ತೋರಿಸಿದ ತಮಾಷೆಯ ವಿಡಿಯೋ ವೈರಲ್ ಆಗಿದೆ.
ದಿನೇಶ್ ಕಾರ್ತಿಕ್ ಮತ್ತು ರೋಹಿತ್ ಶರ್ಮಾ ನಡುವಿನ ಫ್ರೆಂಡ್ ಶಿಪ್ ಎಲ್ಲರಿಗೂ ಗೊತ್ತೇ ಇದೆ. ಯಾವತ್ತೂ ಇಬ್ಬರೂ ಒಬ್ಬರಿಗೊಬ್ಬರು ಕಾಲೆಳೆಯುತ್ತಲೇ ಇರುತ್ತಾರೆ. ಐಪಿಎಲ್ ಸಂದರ್ಭದಲ್ಲೂ ಮೈದಾನದಲ್ಲಿ ಇಬ್ಬರೂ ಕಿಚಾಯಿಸುತ್ತಿದ್ದ ಕ್ಷಣಗಳು ಅನೇಕ ಬಾರಿ ಕಂಡುಬಂದಿದೆ.
ಇದೀಗ ನಿನ್ನೆಯ ಪಂದ್ಯದಲ್ಲೂ ಇಬ್ಬರ ತಮಾಷೆಯ ಕ್ಷಣ ನೋಡುಗರಿಗೆ ನಗು ಮೂಡಿಸಿದೆ. ಟಾಸ್ ವೇಳೆ ರೋಹಿತ್ ಶರ್ಮಾ, ಕಿವೀಸ್ ನಾಯಕ ಮತ್ತು ಮ್ಯಾಚ್ ರೆಫರಿಗಳ ಜೊತೆ ಮೈದಾನದಲ್ಲಿ ನಿಂತಿದ್ದರು.
ರೋಹಿತ್ ಶರ್ಮಾ ಮತ್ತೊಮ್ಮೆ ಟಾಸ್ ಸೋತರು. ಆಗ ಎದುರೇ ನಿಂತಿದ್ದ ಕಾಮೆಂಟೇಟರ್ ದಿನೇಶ್ ಕಾರ್ತಿಕ್ ಸೋತು ಬಿಟ್ಟೆ ಎಂದು ಕಿಚಾಯಿಸಿದ್ದಾರೆ. ಆಗ ರೋಹಿತ್ ಟಾಸ್ ನಲ್ಲಿದ್ದೇವೆ ಎಂಬುದನ್ನೂ ಮರೆತು ಮುಂದೆ ಬಂದು ಹೋಗಲೋ ಎಂದು ತಮಾಷೆಯಾಗಿ ಗದರಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.