ದುಬೈ: ಗ್ಲೆನ್ ಫಿಲಿಪ್ ಕ್ಯಾಚ್ ಪಡೆದ ಪರಿ ಸ್ವತಃ ವಿರಾಟ್ ಕೊಹ್ಲಿಗೇ ನಂಬಲಸಾಧ್ಯವಾಗಿತ್ತು. ಇದನ್ನು ಅವರು ಪೆವಿಲಿಯನ್ ನಲ್ಲೂ ರವೀಂದ್ರ ಜಡೇಜಾ ಜೊತೆ ಚರ್ಚಿಸುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.
ನ್ಯೂಜಿಲೆಂಡ್ ವಿರುದ್ಧದ ನಿನ್ನೆಯ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೀಡಿದ್ದ ಕ್ಯಾಚ್ ನ್ನು ಗ್ಲೆನ್ ಫಿಲಿಪ್ ಹಿಡಿದ ಪರಿ ಎಲ್ಲರನ್ನೂ ನಿಬ್ಬೆರಗಾಗಿಸುವಂತಿತ್ತು. ಸ್ವತಃ ಕೊಹ್ಲಿಯೇ ಅಚ್ಚರಿಯ ಮುಖಭಾವ ಮಾಡಿ ಕೆಲ ಕಾಲ ನಿಂತಿದ್ದರು.
ಈ ಕ್ಯಾಚ್ ಕೊಹ್ಲಿಯನ್ನು ಎಷ್ಟು ಕಾಡಿದೆ ಎಂದರೆ ಪೆವಿಲಿಯನ್ ಗೆ ಹೋದ ಬಳಿಕವೂ ಸಹ ಆಟಗಾರ ರವೀಂದ್ರ ಜಡೇಜಾ ಜೊತೆ ಚರ್ಚೆ ನಡೆಸುತ್ತಿದ್ದರು. ಫಿಲಿಪ್ ಹೇಗೆ ಕ್ಯಾಚ್ ಪಡೆದರು ಎಂಬುದನ್ನು ಜಡೇಜಾ ತಾವೇ ಆಕ್ಷನ್ ಮಾಡಿ ಕೊಹ್ಲಿಗೆ ತೋರಿಸುತ್ತಿದ್ದರು.
ಅತ್ತ ಕೊಹ್ಲಿಯೂ ಇದನ್ನು ನಂಬಲು ಸಾಧ್ಯವೇ ಆಗುತ್ತಿಲ್ಲ ಎಂಬಂತೆ ಜಡೇಜಾ ಜೊತೆ ಹೇಳಿಕೊಳ್ಳುತ್ತಿದ್ದರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ಇಲ್ಲಿದೆ ನೋಡಿ.