Select Your Language

Notifications

webdunia
webdunia
webdunia
webdunia

ತ್ರಿಶತಕದ ಸಂಭ್ರಮದಲ್ಲಿ ವಿರಾಟ್‌ ಕೊಹ್ಲಿ: ಮತ್ತಷ್ಟು ದಾಖಲೆಗಳ ಮೇಲೆ ಸ್ಟಾರ್ ಬ್ಯಾಟರ್‌ ಕಣ್ಣು

ತ್ರಿಶತಕದ ಸಂಭ್ರಮದಲ್ಲಿ ವಿರಾಟ್‌ ಕೊಹ್ಲಿ: ಮತ್ತಷ್ಟು ದಾಖಲೆಗಳ ಮೇಲೆ ಸ್ಟಾರ್ ಬ್ಯಾಟರ್‌ ಕಣ್ಣು

Sampriya

ದುಬೈ , ಭಾನುವಾರ, 2 ಮಾರ್ಚ್ 2025 (12:09 IST)
Photo Courtesy X
ದುಬೈ: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಅಬ್ಬರಿಸಿದ್ದ ಭಾರತದ ಸ್ಟಾರ್ ಬ್ಯಾಟರ್‌ ವಿರಾಟ್‌ ಕೊಹ್ಲಿ ಈಗ ತ್ರಿಶತಕದ ಸಂಭ್ರಮದಲ್ಲಿದ್ದಾರೆ. 36 ವರ್ಷ ವಯಸ್ಸಿನ ಕಿಂಗ್‌ ಕೊಹ್ಲಿ 300ನೇ ಏಕದಿನ ಪಂದ್ಯದ ಹೊಸ್ತಿಲಲ್ಲಿದ್ದಾರೆ.

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳು ಮುಖಾಮುಖಿಯಾಗುತ್ತಿವೆ. 299 ಏಕದಿನ ಪಂದ್ಯಗಳನ್ನು ಆಡಿರುವ ಕೊಹ್ಲಿ ಈ ಪಂದ್ಯದಲ್ಲಿ ಕಣಕ್ಕೆ ಇಳಿದರೆ 300 ಪಂದ್ಯಗಳನ್ನು ಆಡಿದ ಭಾರತದ ಏಳನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.

2008ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪಾದರ್ಪಣೆ ಮಾಡಿದ್ದ ವಿರಾಟ್‌ ಕೊಹ್ಲಿ ಅವರು 299 ಪಂದ್ಯಗಳಿಂದ 58.20ರ ಸರಾಸರಿಯಲ್ಲಿ 14,085 ರನ್‌ ಗಳಿಸಿದ್ದಾರೆ. 183 ರನ್‌ ಗರಿಷ್ಠ ರನ್‌ ಮೊತ್ತ ಗಳಿಸಿರುವ ಅವರು 51 ಶತಕ ಮತ್ತು 73 ಅರ್ಧ ಶತಕ ದಾಖಲಿಸಿದ್ದಾರೆ. ಜೊತೆಗೆ 158 ಕ್ಯಾಚ್‌ ಹಿಡಿದಿರುವ ದಾಖಲೆ ಅವರ ಬುಟ್ಟಿಯಲ್ಲಿದೆ.

ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ 463 ಪಂದ್ಯ, ಮಹೇಂದ್ರ ಸಿಂಗ್‌ ಧೋನಿ 347 ಪಂದ್ಯ, ರಾಹುಲ್‌ ದ್ರಾವಿಡ್‌ 340 ಪಂದ್ಯ, ಮೊಹಮ್ಮದ್ ಅಜರುದ್ದೀನ್‌ 334 ಪಂದ್ಯ, ಸೌರವ್‌ ಗಂಗೂಲಿ 308 ಪಂದ್ಯ ಮತ್ತು ಯುವರಾಜ್‌ ಸಿಂಗ್‌ 301 ಪಂದ್ಯಗಳನ್ನು ಆಡಿರುವ ದಾಖಲೆ ಹೊಂದಿದ್ದಾರೆ.

ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 52 ರನ್ ಗಳಿಸಿದರೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಭಾರತೀಯ ಎಂಬ ದಾಖಲೆಗೆ ಪಾತ್ರವಾಗುವರು.  ವಿರಾಟ್ ಕೊಹ್ಲಿ 15 ಪಂದ್ಯಗಳು, 651 ರನ್‌ ಗಳಿಸಿದ್ದಾರೆ. ಶಿಖರ್ ಧವನ್​ 10 ಪಂದ್ಯಗಳು 701 ರನ್‌ಗಳಿಸಿದ್ದಾರೆ. ಶಿಖರ್‌ ದಾಖಲೆಯನ್ನು ಮುರಿಯುವ ಅವಕಾಶ ಹೊಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಾರಾಗುತ್ತಾರೆ ಎ ಗುಂಪಿನ ಕಿಂಗ್‌: ಭಾರತ-ಕಿವೀಸ್‌ ಹೈವೋಲ್ಟೇಜ್‌ ಹಣಾಹಣಿಗೆ ಕ್ಷಣಗಣನೆ