Select Your Language

Notifications

webdunia
webdunia
webdunia
webdunia

ಟೀಕೆಗೆ ಗುರಿಯಾದ ಬೆನ್ನಲ್ಲೇ ಅಭ್ಯಾಸದಿಂದ ದೂರವುಳಿದ ಬಾಬರ್‌: ಇಂದು ಕಣಕ್ಕೆ ಇಳಿಯುವುದು ಡೌಟ್‌

ಟೀಕೆಗೆ ಗುರಿಯಾದ ಬೆನ್ನಲ್ಲೇ ಅಭ್ಯಾಸದಿಂದ ದೂರವುಳಿದ ಬಾಬರ್‌: ಇಂದು ಕಣಕ್ಕೆ ಇಳಿಯುವುದು ಡೌಟ್‌

Sampriya

ದುಬೈ , ಭಾನುವಾರ, 23 ಫೆಬ್ರವರಿ 2025 (11:33 IST)
Photo Courtesy X
ದುಬೈ: ಚಾಂಪಿಯನ್ಸ್ ಟ್ರೊಫಿಯ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ 90 ಎಸೆತಗಳನ್ನು ಎದುರಿಸಿ ಕೇವಲ 64 ರನ್‌ ಗಳಿಸಿ ವ್ಯಾಪಕ ಟೀಕೆಗೆ ಒಳಗಾದ ಪಾಕಿಸ್ತಾನ ತಂಡದ ಮಾಜಿ ನಾಯಕ, ಪ್ರಮುಖ ಬ್ಯಾಟರ್‌ ಪಾಕಿಸ್ತಾನದ ಅಭ್ಯಾಸದಿಂದ ದೂರವುಳಿದಿದ್ದಾರೆ.

‌ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡ ಇಂದು ತನ್ನ ಸಾಂಪ್ರಾಯಕಿಕ ಎದುರಾಳಿ ಪಾಕಿಸ್ತಾನ ತಂಡದ ಸವಾಲನ್ನು ಎದುರಿಸಲಿದೆ. ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2:30ಕ್ಕೆ ಪಂದ್ಯ ಆರಂಭವಾಗಲಿದೆ. ಇದಕ್ಕೂ ಮುನ್ನ ಪಾಕಿಸ್ತಾನ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೆ ಸಾಬೀತಾಗಿದೆ.

ಪಾಕ್‌ನ  ಸ್ಟಾರ್‌ ಕ್ರಿಕೆಟರ್‌ ಬಾಬರ್‌ ಆಜಂ ಶನಿವಾರ ನಡೆದ ಅಭ್ಯಾಸದಿಂದ ದೂರ ಉಳಿಸಿದ್ದಾರೆ. ಅಭ್ಯಾಸ ವೇಳೆ ಬಾಬರ್‌ ಕಾಣದ ಹಿನ್ನೆಲೆಯಲ್ಲಿ ಅವರನ್ನು ಭಾರತ ವಿರುದ್ಧದ ಪಂದ್ಯಕ್ಕೆ ಪರಿಗಣಿಸಲಾಗುವುದಿಲ್ಲ ಎಂಬ ವದಂತಿ ಹಬ್ಬಿದೆ.  ಈ ಬಗ್ಗೆಯೂ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು ಪಿಸಿಬಿ ಯಾವುದೇ ಸ್ಪಷ್ಟನೆ ನೀಡಿಲ್ಲ.

ನ್ಯೂಜಿಲೆಂಡ್‌ ವಿರುದ್ಧ ಸೋತಿರುವ ಪಾಕ್‌ ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಭಾರತ ವಿರುದ್ಧದ ಪಂದ್ಯಕ್ಕೆ ಗಾಯಾಳು ಫಖರ್ ಜಮಾನ್ ಹೊರಗುಳಿದಿರುವುದು ಕೂಡ ಪಾಕ್‌ನ ಒತ್ತಡವನ್ನು ತೀವ್ರಗೊಳಿಸಿದೆ. ಇವರ ಬದಲಿಗೆ ಇಮಾಮ್ ಉಲ್ ಹಕ್ ತಂಡವನ್ನು ಸೇರ್ಪಡೆಗೊಂಡಿದ್ದಾರೆ.

ಈ ಮಧ್ಯೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಮೊಹ್ಸಿನ್‌ ನಖ್ವಿ ಅವರು ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ʻಏನೇ ಆಗಲಿ ಭಾರತದ ವಿರುದ್ಧ ಗೆಲ್ಲಲೇಬೇಕುʼ ಎಂದು ತಾಕೀತು ಮಾಡಿದ್ದಾರೆ. ಪಾಕ್‌ ತಂಡವು 2017ರಲ್ಲಿ ಚಾಂಪಿಯನ್‌ ಆಗಿತ್ತು. ಈ ಬಾರಿ ಆತಿಥ್ಯವನ್ನು ವಹಿಸಿಕೊಂಡಿರುವ ಪಾಕ್‌ ಇಂದು ಸೋತಲ್ಲಿ, ಟೂರ್ನಿಯಿಂದಲೇ ಹೊರಬೀಳಲಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

2017ರ ಫೈನಲ್‌ನ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುತ್ತಾ ಭಾರತ: ಚಾಂಪಿಯನ್ಸ್‌ ಟ್ರೋಫಿಯಲ್ಲಿ ಬಲಾಬಲ ಹೇಗಿದೆ