ಲಾಹೋರ್: ಆಸ್ಟ್ರೇಲಿಯ ತಂಡವು ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ ಶನಿವಾರ ಇಂಗ್ಲೆಂಗ್ ತಂಡವನ್ನು ಮಣಿಸುವ ಜೊತೆಗೆ ಸಾಲು ಸಾಲು ದಾಖಲೆಗಳನ್ನು ಬರೆದಿದೆ.
ಆಸ್ಟ್ರೇಲಿಯಾ ತಂಡವು ಬಿ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ, ಟೂರ್ನಿಯಲ್ಲಿ ಶುಭಾರಂಭವನ್ನು ಮಾಡಿತು.
ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ತಂಡವು ಬೆನ್ ಡಕೆಟ್ (165;143ಎ) ಅವರ ಭರ್ಜರಿ ಶತಕಗಳ ನೆರವಿನಿಂದ 8 ವಿಕೆಟ್‌ಗೆ 351 ರರ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಇದು ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ದಾಖಲಿಸಿತ್ತು.
ಆದರೆ, ಈ ಗುರಿಯನ್ನು ಇನ್ನೂ 15 ಎಸೆತ ಬಾಕಿ ಇರುವಂತೆ ಕಾಂಗರೂ ಪಡೆ 5 ವಿಕೆಟ್‌ಗೆ 356 ರನ್ ಗಳಿಸಿ ಜಯಭೇರಿ ಬಾರಿಸಿತು. ಈ ಟೂರ್ನಿ ಮಾತ್ರವಲ್ಲ, ಐಸಿಸಿಯ ಯಾವುದೇ ಟೂರ್ನಿಯಲ್ಲಿ ಮೊತ್ತ ಚೇಸಿಂಗ್‌ನ ದಾಖಲೆ ಇದಾಯಿತು.
ಆಸ್ಟ್ರೇಲಿಯಾದ ಜೋಷ್ ಇಂಗ್ಲೆಂಡ್ (ಅಜೇಯ 120, 86ಎ) ಅವರು ಗೆಲುವಿನ ರೂವಾರಿಯಾದರು. ವೇಗದ ಬೌಲರ್ ಮಾರ್ಕ್ ವುಡ್ ಬೌಲಿಂಗ್‌ನಲ್ಲಿ ಸಿಕ್ಸರ್ ಎತ್ತಿ ಗೆಲುವಿನ ರನ್ ಹೊಡೆದರು. ಅವರ ಆಟದಲ್ಲಿ ಎಂಟು ಬೌಂಡರಿಗಳ ಜೊತೆ ಆರು ಸಿಕ್ಸರ್‌ಗಳಿದ್ದವು.
ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್ ಸೇರಿದಂತೆ ಪ್ರಮುಖ ಬೌಲರ್‌ಗಳ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿರುವ ಆಸ್ಟ್ರೇಲಿಯಾಕ್ಕೆ ಬ್ಯಾಟರ್‌ಗಳು ಶಕ್ತಿ ತುಂಬಿದರು.