Select Your Language

Notifications

webdunia
webdunia
webdunia
webdunia

ಟಾಸ್‌ ಗೆದ್ದು ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ ನ್ಯೂಜಿಲೆಂಡ್‌: ಸ್ಟಾರ್‌ ಬ್ಯಾಟರ್‌ ಕೊಹ್ಲಿ ತ್ರಿಶತಕ

ಟಾಸ್‌ ಗೆದ್ದು ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ ನ್ಯೂಜಿಲೆಂಡ್‌: ಸ್ಟಾರ್‌ ಬ್ಯಾಟರ್‌ ಕೊಹ್ಲಿ ತ್ರಿಶತಕ

Sampriya

ದುಬೈ , ಭಾನುವಾರ, 2 ಮಾರ್ಚ್ 2025 (14:09 IST)
ದುಬೈ: ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಇಂದು ಭಾರತ ಮತ್ತು ನ್ಯೂಜಿಲೇಂಡ್‌ ತಂಡಗಳು ಪೈಪೋಟಿ ನಡೆಸಲಿವೆ. ಟಾಸ್ ಗೆದ್ದ ಕಿವೀಸ್‌ ನಾಯಕ ಮಿಚೆಲ್‌ ಸ್ಯಾಂಟನರ್‌ ಅವರು ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್‌ಗೆ ಇದು ಔಪಚಾರಿಕ ಪಂದ್ಯವಾಗಿದೆ. ಈ ಎರಡೂ ತಂಡಗಳು ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿವೆ. ಎ ಗುಂಪಿನಲ್ಲಿರುವ ಈ ತಂಡಗಳು ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿವೆ. ಈಗ ಸಮಾನ ಅಂಕಗಳೊಂದಿಗೆ ನೆಟ್‌ ರನ್‌ರೇಟ್‌ ಆಧಾರದಲ್ಲಿ ನ್ಯೂಜಿಲೆಂಡ್‌ ಅಗ್ರಸ್ಥಾನದಲ್ಲಿದೆ.

ಬಾಂಗ್ಲಾದೇಶ ಮತ್ತು ಪಾಕಿಸ್ಥಾನ ತಂಡಗಳನ್ನು ಬಗ್ಗುಬಡಿದಿರುವ ಈ ಎರಡು ತಂಡಗಳು ಅಜೇಯವಾಗಿ ಸೆಮಿಫೈನಲ್‌ಗೆ ಮುನ್ನಡೆಯಲು ಎದುರು ನೋಡುತ್ತಿವೆ. ಬಿ ಗುಂಪಿನಿಂದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್‌ ಪ್ರವೇಶಿಸಿವೆ.

ಭಾರತ ಸ್ಟಾರ್ ಬ್ಯಾಟರ್‌ ವಿರಾಟ್‌ ಕೊಹ್ಲಿಗೆ ಇದು 300ನೇ ಪಂದ್ಯವಾಗಿದೆ. ಈ ಸಾಧನೆ ಮಾಡಿದ ಭಾರತದ ಏಳನೇ ಆಟಗಾರ ಎಂಬ ಹಿರಿಮೆಗೆ ಅವರು ಪಾತ್ರವಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತ್ರಿಶತಕದ ಸಂಭ್ರಮದಲ್ಲಿ ವಿರಾಟ್‌ ಕೊಹ್ಲಿ: ಮತ್ತಷ್ಟು ದಾಖಲೆಗಳ ಮೇಲೆ ಸ್ಟಾರ್ ಬ್ಯಾಟರ್‌ ಕಣ್ಣು