ದುಬೈ: ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾಕ್ಕೆ ಒಂದು ಲೀಗ್ ಪಂದ್ಯ ಬಾಕಿಯಿದ್ದು ಇದಕ್ಕಾಗಿ ಅಭಿಮಾನಿಗಳು ಒಂದು ವಾರ ಕಾಯಬೇಕಿದೆ. ಇದರಿಂದ ಟೂರ್ನಿ ಯಾಕೋ ಬೋರ್ ಆಗ್ತಿದೆ ಎಂದು ನೆಟ್ಟಿಗರು ಅಭಿಪ್ರಾಯಪಡುತ್ತಿದ್ದಾರೆ.
ಟೀಂ ಇಂಡಿಯಾ ಕಳೆದ ಭಾನುವಾರ ಪಾಕಿಸ್ತಾನ ವಿರುದ್ಧ ಎರಡನೇ ಲೀಗ್ ಪಂದ್ಯವನ್ನು ಆಡಿತ್ತು. ಇದೀಗ ಕೊನೆಯ ಲೀಗ್ ಪಂದ್ಯಕ್ಕಾಗಿ ಅಭಿಮಾನಿಗಳು ಈ ಭಾನುವಾರದವರೆಗೆ ಕಾಯಬೇಕಿದೆ. ಅಂದರೆ ಬರೋಬ್ಬರಿ ಒಂದು ವಾರ ಬ್ರೇಕ್.
ಯಾವುದೇ ಐಸಿಸಿ ಕೂಟವಿರಲಿ, ಭಾರತ ತಂಡ ಆಡುವ ಪಂದ್ಯಗಳಿದ್ದರೆ ಮಾತ್ರ ಜನ ಮೈದಾನಕ್ಕೆ ಬರುತ್ತಾರೆ. ಆದರೆ ಈಗ ಭಾರತ ತಂಡ ಆಡುವ ಪಂದ್ಯಗಳಿಲ್ಲದೇ ಮೈದಾನ ಖಾಲಿ ಹೊಡೆಯುತ್ತಿದೆ. ಟಿವಿ ವೀಕ್ಷಣೆಗೂ ಅಷ್ಟೊಂದು ಬೇಡಿಕೆಯಿಲ್ಲ.
ಒಂದು ಗೆಲುವಿನ ನಂತರ ಹೆಚ್ಚು ಬ್ರೇಕ್ ಸಿಕ್ಕಾಗ ಗೆಲುವಿನ ಲಹರಿ ಹೊರಟು ಹೋದರೆ ಎಂಬ ಆತಂಕವಿರುತ್ತದೆ. ಹೀಗಾಗಿ ಎಲ್ಲಿ ಟೀಂ ಇಂಡಿಯಾ ಆಟಗಾರರ ಗೆಲುವಿನ ಲಹರಿಗೆ ಬ್ರೇಕ್ ಬೀಳುತ್ತದೋ ಎಂಬ ಆತಂಕ ಅಭಿಮಾನಿಗಳದ್ದು. ಅದೇನೇ ಇರಲಿ, ಭಾನುವಾರದವರೆಗೂ ಭಾರತ ಆಡುವ ಪಂದ್ಯಕ್ಕಾಗಿ ಕಾಯಲೇಬೇಕಿದೆ.