ದುಬೈ: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ಕೆಎಲ್ ರಾಹುಲ್ ಗೆ ನೆಟ್ಸ್ ಪ್ರಾಕ್ಟೀಸ್ ವೇಳೆ ಈ ಒಬ್ಬ ಬೌಲರ್ ನ್ನು ಎದುರಿಸುವುದಕ್ಕೇ ಇಷ್ಟವಿಲ್ವಂತೆ. ಅವರು ಯಾರು ಇಲ್ಲಿ ನೋಡಿ.
ಟೀಂ ಇಂಡಿಯಾ ಕಂಡ ಪ್ರತಿಭಾವಂತ ಕ್ರಿಕೆಟಿಗ ಕೆಎಲ್ ರಾಹುಲ್. ಇದೀಗ ಸಂದರ್ಶನವೊಂದರಲ್ಲಿ ಕೆಎಲ್ ರಾಹುಲ್ ತಮ್ಮ ಮನದಾಳ ಹಂಚಿಕೊಂಡಿದ್ದಾರೆ. ಇದರಲ್ಲಿ ವಿಶ್ವದ ಶ್ರೇಷ್ಠ ಬೌಲರ್ ಗಳ ಬಗ್ಗೆಯೂ ರಾಹುಲ್ ಮಾತನಾಡಿದ್ದಾರೆ.
ನೆಟ್ ಪ್ರಾಕ್ಟೀಸ್ ಮಾಡುವಾಗ ನಿಮಗೆ ಟೀಂ ಇಂಡಿಯಾದ ಯಾವ ಬೌಲರ್ ನ್ನು ಎದುರಿಸಲು ಇಷ್ಟವಿಲ್ಲ ಎಂದು ಸಂದರ್ಶಕರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಾಹುಲ್, ನನಗೆ ಮೊಹಮ್ಮದ್ ಶಮಿ ಬೌಲಿಂಗ್ ಎದುರಿಸಲು ಇಷ್ಟವಿಲ್ಲ. ಅವರ ಬೌಲಿಂಗ್ ನಲ್ಲಿರುವ ಪೇಸ್ ಮತ್ತು ವೈವಿದ್ಯತೆಯನ್ನು ಎದುರಿಸುವುದು ಕಷ್ಟ ಎಂದಿದ್ದಾರೆ.
ಇನ್ನು ಜಾಗತಿಕವಾಗಿ ನೋಡುವುದಾದರೆ ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಬೌಲಿಂಗ್ ಎದುರಿಸುವುದೂ ಕಷ್ಟ ಎಂದಿದ್ದಾರೆ. ಜಾಗತಿಕವಾಗಿ ನನ್ನನ್ನು ಕಾಡಿದ ಒಬ್ಬ ಸ್ಪಿನ್ ಬೌಲರ್ ಎಂದರೆ ಅದು ರಶೀದ್ ಖಾನ್ ಎಂದು ರಾಹುಲ್ ಮನದಾಳ ಹಂಚಿಕೊಂಡಿದ್ದಾರೆ.