Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾದವರ ಗೆಲುವಿಗೆ ಮಾಟ, ಮಂತ್ರ ಕಾರಣ: ಪಾಕಿಸ್ತಾನ್ ಹೊಸ ಆರೋಪ (ವಿಡಿಯೋ)

IND vs PAK

Krishnaveni K

ಕರಾಚಿ , ಮಂಗಳವಾರ, 25 ಫೆಬ್ರವರಿ 2025 (15:36 IST)
ಕರಾಚಿ: ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ್ ವಿರುದ್ಧ ಗೆಲ್ಲಲು ಟೀಂ ಇಂಡಿಯಾ ಪರ ಮಾಟ ಮಂತ್ರ ಮಾಡಿದ್ದೇ ಕಾರಣವಂತೆ! ಹೀಗಂತ ಪಾಕ್ ಟಿವಿ ವಾಹಿನಿಯೊಂದರಲ್ಲಿ ಚರ್ಚೆ ನಡೆದಿದೆ.

ಪಾಕಿಸ್ತಾನವನ್ನು ಸೋಲಿಸಿದ ಟೀಂ ಇಂಡಿಯಾ ಸೆಮಿಫೈನಲ್ ಗೆ ಲಗ್ಗೆಯಿಟ್ಟಿದೆ. ಈ ಸೋಲಿನಿಂದ ಪಾಕ್ ತಂಡ ಸೆಮಿಫೈನಲ್ ನಿಂದಲೇ ಹೊರಬಿದ್ದಿದೆ. ಇದರ ಬೆನ್ನಲ್ಲೇ ಪಾಕ್ ಟಿವಿ ವಾಹಿನಿಯಲ್ಲಿ ಕ್ರಿಕೆಟ್ ತಜ್ಞರ ತಂಡ ಚರ್ಚೆ ನಡೆಸಿದೆ.

ಈ ಚರ್ಚೆಯಲ್ಲಿ ಒಬ್ಬ ವ್ಯಕ್ತಿ ಭಾರತವು ಹಿಂದೂ ಪಂಡಿತರನ್ನು ದುಬೈ ಕ್ರೀಡಾಂಗಣಕ್ಕೆ ಕರೆಸಿಕೊಂಡು ತಂಡ ಗೆಲ್ಲಲು ಮಾಟ ಮಾಡಿಸಿದೆ. ಇದರಿಂದಾಗಿ ಪಾಕ್ ಆಟಗಾರರ ಗಮನ ಬೇರೆ ಕಡೆಗೆ ಸೆಳೆಯಿತು. ಇದೇ ಕಾರಣಕ್ಕೆ ಪಾಕಿಸ್ತಾನದಲ್ಲಿ ಆಡಲು ಭಾರತ ನಿರಾಕರಿಸಿತ್ತು. ಏಕೆಂದರೆ ಪಾಕಿಸ್ತಾನದಲ್ಲಿ ಪಂದ್ಯ ನಡೆದರೆ ಪಂದ್ಯಕ್ಕೆ ಮುನ್ನ ಪೂಜೆ ಮಾಡಲು ಅವರಿಗೆ ಅವಕಾಶವಿರಲಿಲ್ಲ ಎಂದೆಲ್ಲಾ ವಿಚಿತ್ರ ವಾದ ಮಂಡಿಸಿದ್ದಾನೆ.

ಉಳಿದವರೂ ಇದನ್ನು ಭಾರೀ ತನ್ಮಯತೆಯಿಂದ ಆಲಿಸಿದ್ದಾರೆ. ಪ್ರತೀ ಬಾರಿಯೂ ಭಾರತ ಗೆದ್ದಾಗ ಪಿಚ್, ಚೆಂಡು, ಐಸಿಸಿ ಅನುಕೂಲ ಮಾಡಿತು ಎಂದೆಲ್ಲಾ ಗೂಬೆ ಕೂರಿಸುವ ಪಾಕಿಸ್ತಾನದ ಕ್ರಿಕೆಟ್ ಪಂಡಿತರು ಈಗ ಮಾಟ ಮಂತ್ರದ ಕಾರಣ ನೀಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಚಾಂಪಿಯನ್ಸ್ ಟ್ರೋಫಿಯ ಇಂದಿನ ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಅಡ್ಡಿ: ಟಾಸ್‌ ವಿಳಂಬ