Select Your Language

Notifications

webdunia
webdunia
webdunia
webdunia

ಚಾಂಪಿಯನ್ಸ್ ಟ್ರೋಫಿಯ ಇಂದಿನ ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಅಡ್ಡಿ: ಟಾಸ್‌ ವಿಳಂಬ

ICC Champions Trophy

Sampriya

ಪಾಕಿಸ್ತಾನ , ಮಂಗಳವಾರ, 25 ಫೆಬ್ರವರಿ 2025 (14:40 IST)
Photo Courtesy X
ಪಾಕಿಸ್ತಾನ: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಇಂದು ಮತ್ತೊಂದು ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ. ಎರಡು ಬಲಿಷ್ಠ ತಂಡಗಳಾದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಮಿಫೈನಲ್‌ಗೆ ಸ್ಥಾನ ಕಾದಿರಿಸಲು ಪೈಪೋಟಿ ನಡೆಸಲಿವೆ.

ರಾವಲ್ಪೆಂಡಿಯಲ್ಲಿ ನಡೆಯುವ ಈ ಪಂದ್ಯಕ್ಕೆ ಮಳೆ ಅಡಚಣೆ ಉಂಟುಮಾಗಿದೆ. ಹೀಗಾಗಿ ಟಾಸ್‌ ಪ್ರಕ್ರಿಯೆಯೂ ವಿಳಂಬವಾಗಿದೆ. ಕ್ರೀಡಾಂಗಣದಲ್ಲಿ ಮಂದಬೆಳಕು ಆವರಿಸಿದ್ದು, ಕೇವಲ ಹೊತ್ತಿನಲ್ಲಿ ಪಂದ್ಯ ಆರಂಭದ ನಿರೀಕ್ಷೆಯಿದೆ.

ಚಾಂಪಿಯನ್ಸ್ ಟ್ರೋಫಿ ಬಿ ಗುಂಪಿನ ಪಂದ್ಯದಲ್ಲಿ ಈ ತಂಡಗಳು ಮುಖಾಮುಖಿಯಾಗುತ್ತಿದ್ದು, ಗೆಲ್ಲುವ ತಂಡದ ಸೆಮಿಫೈನಲ್ ಪ್ರವೇಶ ಸುಗಮವಾಗಲಿದೆ. ಹೀಗಾಗಿ ಉಭಯ ತಂಡಗಲಿಗೆ ಇದು ಪ್ರತಿಷ್ಠೆಯ ಹಣಾಹಣಿಯಾಗಿದೆ.

ಲಾಹೋರ್‌ನಲ್ಲಿ ಇಂಗ್ಲೆಂಡ್‌ ಎದುರು 351 ರನ್‌ ಮೊತ್ತವನ್ನು ಬೆನ್ನಟ್ಟಿ ಕಾಂಗರೂ ಪಡೆ ಪರಾಕ್ರಮ ಮೆರೆದಿದೆ. ಈ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿರುವ ಸ್ಟೀವ್ ಸ್ಮಿತ್‌ ಬಳಗವು ಐಸಿಸಿ ಟೂರ್ನಿಯಲ್ಲಿ ಪುಟಿದೇಳುವ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದೆ.

ದಕ್ಷಿಣ ಆಫ್ರಿಕಾ ತಂಡವು ಆರಂಭಿಕ ತಂಡದಲ್ಲಿ ಅಫ್ಗಾನಿಸ್ತಾನ ತಂಡವನ್ನು 107 ರನ್‌ಗಳಿಂದ ಮಣಿಸಿ, ಆತ್ಮವಿಶ್ವಾಸದಿಂದ ಬೀಗುತ್ತಿದೆ. ತಂಡವು ಬಲಿಷ್ಠ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಬಳಗವನ್ನು ಹೊಂದಿದ್ದು ಗೆಲುವಿನ ಛಲದಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Kerala Murder: ಕೇರಳದಲ್ಲಿ ಬೆಚ್ಚಿಬೀಳಿಸುವ ಹತ್ಯಾಕಾಂಡ: ಅಜ್ಜಿ, ಗರ್ಲ್ ಫ್ರೆಂಡ್ ಸೇರಿದ 5 ಮಂದಿ ಕೊಂದ ಪಾಪಿ