ದುಬೈ: ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಪಾಕಿಸ್ತಾನ ತಂಡವನ್ನು ಸದೆಬಡಿದು ಸೆಮಿಫೈನಲ್ ಗೆ ಲಗ್ಗೆಯಿಟ್ಟಿರುವ ಟೀಂ ಇಂಡಿಯಾಗೆ ಇನ್ನು ಒಂದು ವಾರ ರೆಸ್ಟ್.
ಚಾಂಪಿಯನ್ಸ್ ಟ್ರೋಫಿಯಲ್ಲಿ ಎರಡು ಲೀಗ್ ಪಂದ್ಯಗಳನ್ನು ಆಡಿರುವ ಟೀಂ ಇಂಡಿಯಾ ಎರಡರಲ್ಲೂ ಗೆಲುವು ಸಾಧಿಸಿದ್ದು ಈಗ ಕೊನೆಯ ಒಂದು ಲೀಗ್ ಪಂದ್ಯವನ್ನು ಆಡಬೇಕಿದೆ. ನ್ಯೂಜಿಲೆಂಡ್ ವಿರುದ್ಧ ಕೊನೆಯ ಲೀಗ್ ಪಂದ್ಯ ಬಾಕಿಯಿದೆ.
ಇದು ಮಾರ್ಚ್ 2 ರಂದು ನಡೆಯಲಿರುವ ಪಂದ್ಯವಾಗಿದೆ. ಅಂದರೆ ಟೀಂ ಇಂಡಿಯಾಗೆ ಬರೋಬ್ಬರಿ ಒಂದು ಕಾಲ ವಿಶ್ರಾಂತಿ ಸಿಕ್ಕಂತಾಗುತ್ತದೆ. ಕ್ರಿಕೆಟ್ ಪ್ರೇಮಿಗಳಿಗೆ ಇದರಿಂದ ನಿರಾಸೆಯಾಗಬಹುದು. ಆದರೆ ಟೀಂ ಇಂಡಿಯಾದಲ್ಲಿ ಈಗಾಗಲೇ ಮೊಹಮ್ಮದ್ ಶಮಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಗಾಯದ ಅಂಚಿನಲ್ಲಿದ್ದಾರೆ. ಇವರೆಲ್ಲರಿಗೂ ಈ ಬ್ರೇಕ್ ನಿಂದ ಲಾಭವಾಗಲಿದೆ.
ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಸೋತರೂ ಸೆಮಿಫೈನಲ್ ಗೆ ಹೋಗಲಿದೆ. ಯಾಕೆಂದರೆ ಈಗಾಗಲೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಮಾರ್ಚ್ 4 ಕ್ಕೆ ಸೆಮಿಫೈನಲ್ ನಡೆಯಲಿದ್ದು, ಅದಾದ ಬಳಿಕ ಮಾರ್ಚ್ 9 ಕ್ಕೆ ಫೈನಲ್ ಪಂದ್ಯ ನಡೆಯುವುದು.