Select Your Language

Notifications

webdunia
webdunia
webdunia
webdunia

Champions Trophy: ಭಾರತ, ಪಾಕಿಸ್ತಾನ ಪಂದ್ಯವನ್ನು ಎಲ್ಲಿ ಲೈವ್ ವೀಕ್ಷಿಸಬೇಕು

India Pakistan match

Krishnaveni K

ದುಬೈ , ಶನಿವಾರ, 22 ಫೆಬ್ರವರಿ 2025 (18:18 IST)
ದುಬೈ: ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ನಾಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು ಈ ಪಂದ್ಯದ ಸಮಯ, ಎಲ್ಲಿ ಲೈವ್ ವೀಕ್ಷಿಸಬೇಕು ಇಲ್ಲಿದೆ ವಿವರ.

ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಾಳೆ ಹಗಲು-ರಾತ್ರಿಯಾಗಿ ಪಂದ್ಯ ನಡೆಯಲಿದೆ. ಎರಡೂ ತಂಡಗಳೂ ಈಗಾಗಲೇ ಲೀಗ್ ಹಂತದಲ್ಲಿ ಮೊದಲನೆಯ ಪಂದ್ಯವಾಡಿದೆ. ಭಾರತ ಬಾಂಗ್ಲಾದೇಶ ವಿರುದ್ಧ ಮೊದಲ ಪಂದ್ಯವನ್ನಾಡಿ ಗೆದ್ದರೆ ಪಾಕಿಸ್ತಾನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿತ್ತು.

ಹೀಗಾಗಿ ಪಾಕಿಸ್ತಾನಕ್ಕೆ ಇಂದು ಗೆಲ್ಲಲೇಬೇಕಾದ ಒತ್ತಡವಿದೆ. ಒಂದು ವೇಳೆ ಇಂದು ಸೋತರೆ ಪಾಕಿಸ್ತಾನ ಲೀಗ್ ಹಂತದಲ್ಲೇ ಹೊರಬೀಳುವ ಸಾಧ್ಯತೆಯಿದೆ. ಅತ್ತ ಭಾರತಕ್ಕೆ ಇಂದು ಗೆದ್ದರೆ ಮುಂದಿನ ಹಾದಿ ಸುಗಮವಾಗಲಿದೆ. ಕಳೆದ ಪಂದ್ಯದಲ್ಲಿ ಪಾಕ್ ಆಟಗಾರರು ಆಡಿದ ರೀತಿ ಗಮನಿಸಿದರೆ ಈ ಪಂದ್ಯದಲ್ಲಿ ಭಾರತವನ್ನು ಗೆಲ್ಲಬೇಕಾದರೆ ತಂಡ ಸಾಕಷ್ಟು ಶ್ರಮವಹಿಸಬೇಕಿದೆ. ಟೀಂ ಇಂಡಿಯಾದಲ್ಲಿ ಏಳನೇ ಕ್ರಮಾಂಕದವರೆಗೂ ಬ್ಯಾಟಿಂಗ್ ಮಾಡುವ ಸಾಮರ್ಥ್ಯವಿದೆ. ಇಬ್ಬರು ಆಲ್ ರೌಂಡರ್ ಗಳಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ಆದರೆ ಅತ್ತ ಪಾಕಿಸ್ತಾನಕ್ಕೆ ಆಲ್ ರೌಂಡರ್ ಮತ್ತು ಉತ್ತಮ ಸ್ಪಿನ್ನರ್ ನ ಕೊರತೆ ಕಾಡುತ್ತಿದೆ. ಜೊತೆಗೆ ಫಕರ್ ಜಮಾನ್ ಗಾಯಗೊಂಡಿರುವುದು ಬ್ಯಾಟಿಂಗ್ ಗೆ ದೊಡ್ಡ ಹೊಡೆತ ನೀಡಿದೆ. ಭಾರತ ತಂಡದಲ್ಲಿ ಈ ಪಂದ್ಯದಲ್ಲಿ ಹೆಚ್ಚಿನ ಬದಲಾವಣೆಯಾಗುವ ಸಾಧ್ಯತೆಯಿಲ್ಲ.

ಟಾಸ್ ಸಮಯ ಮತ್ತು ಲೈವ್ ವಿಕ್ಷಣೆ ವಿವರ
ಈ ಪಂದ್ಯದ ಟಾಸ್ ಸಮಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 2 ಗಂಟೆಗೆ. 2.30 ಕ್ಕೆ ಪಂದ್ಯ ಆರಂಭವಾಗಲಿದೆ. ಈ ಪಂದ್ಯವನ್ನು ಜಿಯೋ ಹಾಟ್ ಸ್ಟಾರ್ ಆಪ್ ಮೂಲಕ ಅಥವಾ ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ಟಿವಿ ವಾಹಿನಿ ಮೂಲಕ ನೇರಪ್ರಸಾರ ವೀಕ್ಷಿಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನ್ ವಿರುದ್ಧ ಪಂದ್ಯಕ್ಕೆ ಕೊಹ್ಲಿ ವಿಶೇಷ ಟ್ರೈನಿಂಗ್: 3 ಗಂಟೆ ಮೊದಲೇ ಅಭ್ಯಾಸಕ್ಕೆ ಹಾಜರ್