ಕರಾಚಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದ ಆತಿಥ್ಯದಲ್ಲಿ ಇಂದು ಉದ್ಘಾಟನೆಗೊಂಡಿತು. ಉದ್ಘಾಟನೆ ವೇಳೆ ಪಾಕಿಸ್ತಾನ ವಾಯು ಸೇನೆಯ ವಿಮಾನಗಳು ಆಕಾಶದಲ್ಲಿ ಚಿತ್ತಾರ ಮೂಡಿಸಿದ್ದು, ಇದು ಭಾರತದ್ದೇ ಕಾಪಿ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
ಕರಾಚಿಯಲ್ಲಿ ಇಂದು ಉದ್ಘಾಟನಾ ಪಂದ್ಯ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಅತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಆಡುತ್ತಿವೆ. ಇಂದಿನ ಪಂದ್ಯಕ್ಕೆ ಮುನ್ನ ಕರಾಚಿ ಮೈದಾನದಲ್ಲಿ ಪಾಕಿಸ್ತಾನ ಉದ್ಘಾಟನಾ ಸಮಾರಂಭ ಆಯೋಜಿಸಿತ್ತು.
ಎರಡೂ ರಾಷ್ಟ್ರಗಳು ರಾಷ್ಟ್ರಗೀತೆಗಾಗಿ ಮೈದಾನದಲ್ಲಿ ನಿಂತಿದ್ದಾಗ ವಾಯುಸೇನೆ ವಿಮಾನಗಳು ಅಗಸದಲ್ಲಿ ಪಾಕಿಸ್ತಾನದ ಧ್ವಜದ ಬಣ್ಣದ ಚಿತ್ತಾರ ಮೂಡಿಸಿದವು. ಇದನ್ನು ನೋಡಿ ನೆಟ್ಟಿಗರು ಇದು ಭಾರತ ಈ ಹಿಂದೆ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಇದೇ ರೀತಿ ವಾಯುಸೇನೆ ವಿಮಾನ ಬಳಸಿ ಆಕರ್ಷಕ ಶೋ ನೀಡಿದ್ದನ್ನು ನೆನಪಿಸಿದ್ದಾರೆ.
ಇದು ಅಂದು ಭಾರತ ಮಾಡಿದ್ದನ್ನೇ ಪಾಕಿಸ್ತಾನ ಇಂದು ಚೀಪ್ ಆಗಿ ಕಾಪಿ ಮಾಡಿದೆ ಎಂದು ಕೆಲವರು ಟಾಂಗ್ ಕೊಟ್ಟಿದ್ದಾರೆ. ಇನ್ನು, ಕರಾಚಿ ಮೈದಾನ ಇಂದು ಖಾಲಿ ಹೊಡೆಯುತ್ತಿರುವುದನ್ನೂ ಫೋಟೋ ಪ್ರಕಟಿಸಿ ನೆಟ್ಟಿಗರು ಪಾಕ್ ಕಾಲೆಳೆದಿದ್ದಾರೆ.