Select Your Language

Notifications

webdunia
webdunia
webdunia
webdunia

Champions Trophy: ಭಾರತೀಯ ಧ್ವಜ ಹಾಕದೇ ಅವಮಾನ, ನಿಮ್ಮ ಜೆರ್ಸಿ ಮೇಲೆ ನಮ್ಮ ಹೆಸರು ಎಂದು ಪಾಕಿಸ್ತಾನ ಫ್ಯಾನ್ಸ್ ಕುಹುಕ

Rohit Sharma

Krishnaveni K

ಕರಾಚಿ , ಬುಧವಾರ, 19 ಫೆಬ್ರವರಿ 2025 (10:54 IST)
Photo Credit: X
ಕರಾಚಿ: ತನ್ನ ಆತಿಥ್ಯದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಭಾರತ ಬಾರದೇ ಇರುವುದಕ್ಕೆ ಪಿಸಿಬಿ ಸೇಡು ತೀರಿಸಿಕೊಳ್ಳುತ್ತಿದೆ. ಭಾರತೀಯ ಧ್ವಜ ಹಾಕದೇ ಪಿಸಿಬಿ ಅವಮಾನ ಮಾಡಿದರೆ, ಇತ್ತ ಟೀಂ ಇಂಡಿಯಾ ಜೆರ್ಸಿ ಮೇಲೆ ಐಸಿಸಿ ನಿಯಮದಂತೆ ಅತಿಥೇಯ ದೇಶ ಪಾಕಿಸ್ತಾನದ ಹೆಸರು ಹಾಕಿಕೊಂಡಿದ್ದಕ್ಕೆ ಆ ದೇಶದ ಕೆಲವು ಅಭಿಮಾನಿಗಳು ಕುಹುಕವಾಡಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಭಾರತ ಆಡುವ ಪಂದ್ಯಗಳನ್ನು ಬಿಟ್ಟರೆ ಉಳಿದ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯುತ್ತಿದೆ. ಪಾಕಿಸ್ತಾನದಲ್ಲಿ ಪಂದ್ಯ ನಡೆಯುವ ಮೈದಾನದಲ್ಲಿ ಈಗ ಎಲ್ಲಾ ರಾಷ್ಟ್ರಗಳ ಧ್ವಜ ಹಾರಿಸಲಾಗಿದೆ. ಆದರೆ ಇಲ್ಲಿ ಭಾರತೀಯ ಧ್ವಜವನ್ನು ಮಾತ್ರ ಕೈ ಬಿಡಲಾಗಿದೆ. ಈ ಮೂಲಕ ಭಾರತಕ್ಕೆ ಪಾಕಿಸ್ತಾನ ಅವಮಾನ ಮಾಡಿದೆ.

ಇನ್ನೊಂದೆಡೆ ಪಾಕಿಸ್ತಾನ ಫ್ಯಾನ್ಸ್ ಟೀಂ ಇಂಡಿಯಾಕ್ಕೆ ಅವಮಾನ ಮಾಡುತ್ತಿದ್ದಾರೆ. ಐಸಿಸಿ ನಿಯಮದಂತೆ ಎಲ್ಲಾ ತಂಡಗಳೂ ಜೆರ್ಸಿ ಮೇಲೆ ಆತಿಥ್ಯ ವಹಿಸುತ್ತಿರುವ ದೇಶದ ಹೆಸರು ಹಾಕಿಕೊಳ್ಳಬೇಕು. ಅದರಂತೆ ಭಾರತ ತಂಡದ ಜೆರ್ಸಿಯಲ್ಲೂ ಪಾಕಿಸ್ತಾನದ ಹೆಸರಿದೆ.

ಇದನ್ನು ನೋಡಿ ಕೆಲವು ಕಿಡಿಗೇಡಿ ಅಭಿಮಾನಿಗಳು, ‘ನಿಮ್ಮ ಜೆರ್ಸ ಮೇಲೆ ನಿಮ್ಮ ಅಪ್ಪನ ಹೆಸರು ಹಾಕಿಕೊಂಡಿದ್ದೀರಿ’ ಎಂದು ಕುಹುಕವಾಡಿದ್ದಾರೆ. ಮೊದಲು ನಮ್ಮ ದೇಶದ ಹೆಸರು ಹಾಕಿಕೊಳ್ಳದೇ ಇಲ್ಲ ಎಂದಿದ್ದರು. ಈಗ ಹಾಕಿಕೊಂಡಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

TATA WPL 2025: ಗುಜರಾತ್ ಗೆ ಕಡಿವಾಣ ಹಾಕಿ ಕೊನೆಗೂ ಹಳಿಗೆ ಬಂದ ಮುಂಬೈ ವನಿತೆಯರು