ಮುಂಬೈ: ಕಳೆದ ತಿಂಗಳು ನಡೆದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತ ಹೀನಾಯವಾಗಿ ಸೋಲು ಕಂಡಿತ್ತು. ಅದರ ಮುಂದಿನ ಭಾಗವಾಗಿ ಆಟಗಾರರು ತಮ್ಮೊಂದಿಗೆ ಕುಟುಂಬದ ಸದಸ್ಯರನ್ನು ಕರೆದೊಯ್ಯುವಂತಿಲ್ಲ ಎಂದು ನಿಯಮವನ್ನು ಬಿಸಿಸಿಐ ಜಾರಿ ಮಾಡಿತ್ತು.
ಆ ನಿಮಯವನ್ನು ಇದೇ 19ರಿಂದ ದುಬೈನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಟಗಾರರು ಪಾಲಿಸುವುದು ಕಡ್ಡಾಯವಾಗಿದೆ. ಇದೇ 15ರಂದು ಪ್ರಯಾಸ ಕೈಗೊಳ್ಳಲಿರುವ ಭಾರತ ತಂಡದ ಆಟಗಾರರು ತಮ್ಮೊಂದಿಗೆ ಕುಟುಂಬದ ಸದಸ್ಯರನ್ನು ಕರೆದೊಯ್ಯುವಂತಿಲ್ಲ.
ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಫೆಬ್ರುವರಿ 20ರಂದು ಬಾಂಗ್ಲಾದೇಶವನ್ನು ಎದುರಿಸಲಿದೆ. 23ರಂದು ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಆಡಲಿದೆ. ಮಾರ್ಚ್ 2ರಂದು ನ್ಯೂಜಿಲೆಂಡ್ ತಂಡವನ್ನು ಭಾರತ ಎದುರಿಸಲು ಸನ್ನದ್ಧವಾಗಿದೆ.
ಸದ್ಯದ ಮಟ್ಟಿಗೆ ಜಾರಿಯಲ್ಲಿರುವ ನಿಯಮದಂತೆ ಭಾರತದ ಆಟಗಾರರು ತಮ್ಮ ಪತ್ನಿ ಅಥವಾ ಸಂಗಾತಿಯೊಂದಿಗೆ ಈ ಪ್ರವಾಸದಲ್ಲಿ ಹೋಗುವಂತಿಲ್ಲ. ಆದ್ದರಿಂದ ಕುಟುಂಬದ ಸದಸ್ಯರು ಆಟಗಾರರ ಜೊತೆಗೆ ಹೋಗುವಂತಿಲ್ಲ. ಒಂದೊಮ್ಮೆ ವಿಶೇಷ ಅಥವಾ ಅನಿವಾರ್ಯ ಸಂದರ್ಭವಿದ್ದರೆ ಆಟಗಾರರೇ ತಮ್ಮ ಕುಟುಂಬದ ಪ್ರಯಾಣ ಮತ್ತಿತರ ವೆಚ್ಚ ಭರಿಸಬೇಕಿದೆ.
ಪಂದ್ಯಗಳ ಸಂದರ್ಭದಲ್ಲಿ ಯಾವುದೇ ಆಟಗಾರರೂ ವೈಯಕ್ತಿಕ ವಾಹನಗಳಲ್ಲಿ ಪ್ರಯಾಣಿಸುವಂತಿಲ್ಲ. ತಂಡದ ಬಸ್‌ನಲ್ಲಿ ಪ್ರಯಾಣ ಮಾಡುವುದು ಕಡ್ಡಾಯ ಈ ನಿಯಮ ಪಾಲಿಸಬೇಕಿದೆ.