ಮುಂಬೈ: ಇತ್ತೀಚೆಗಿನ ದಿನಗಳಲ್ಲಿ ಟೀಂ ಇಂಡಿಯಾ ಯಶಸ್ಸು ಕಾಣುತ್ತಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಜಸ್ಪ್ರೀತ್ ಬುಮ್ರಾ. ಆದರೆ ಈಗ ಬುಮ್ರಾ ಭಾರತೀಯ ಅಭಿಮಾನಿಗಳು ಕೇಳಲು ಬಯಸದೇ ಇರುವ ಸುದ್ದಿ ಕೊಟ್ಟಿದ್ದಾರೆ.
ಆಸ್ಟ್ರೇಲಿಯಾ ಸರಣಿ ವೇಳೆ ಬೆನ್ನು ನೋವಿಗೊಳಗಾಗಿದ್ದ ಬುಮ್ರಾ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದಿದ್ದಾರೆ. ಇದು ಟೀಂ ಇಂಡಿಯಾ ಮತ್ತು ಅಭಿಮಾನಿಗಳಿಗೆ ಕಹಿ ಸುದ್ದಿ. ಎದುರಾಳಿಗಳು ಸಂಭ್ರಮಿಸುವಂತಹಾ ಸುದ್ದಿ.
ಈ ಹಿಂದೆ ಟಿ20 ವಿಶ್ವಕಪ್ ಗೆಲ್ಲುವಾಗಲೂ ಬುಮ್ರಾ ಬೌಲಿಂಗ್ ಎದುರಾಳಿಗಳಿಗೆ ಸಿಂಹ ಸ್ವಪ್ನವಾಗಿತ್ತು. ಇದೀಗ ಬುಮ್ರಾ ಇಲ್ಲದೇ ಐಸಿಸಿ ಈವೆಂಟ್ ಒಂದರಲ್ಲಿ ಆಡುವುದು ಭಾರತದ ಪಾಲಿಗೆ ಅಷ್ಟು ಶುಭ ಸುದ್ದಿಯಲ್ಲ. ಅವರ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಶಮಿ, ಅರ್ಷ್ ದೀಪ್ ಸಿಂಗ್ ಮೇಲೆ ಹೆಚ್ಚಿನ ಹೊರೆ ಬೀಳಲಿದೆ.
ಬುಮ್ರಾ ಸ್ಥಾನಕ್ಕೆ ಹರ್ಷಿತ್ ರಾಣಾ ಆಯ್ಕೆಯಾಗಿದ್ದು, ಈ ವೇಗಿಗಳ ಪಡೆ ಬುಮ್ರಾ ಅನುಪಸ್ಥಿತಿಯನ್ನು ಮರೆಮಾಚುವಂತಹ ಪ್ರದರ್ಶನ ನೀಡಬೇಕಾಗಿದೆ. ಜೊತೆಗೆ ದುಬೈನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಸ್ಪಿನ್ನರ್ ಗಳೂ ಪ್ರಮುಖ ಪಾತ್ರ ವಹಿಸಬೇಕಾಗುತ್ತದೆ.