ಕಟಕ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದ ವೇಳೆ ಅಂಪಾಯರ್ ಕುಂಡಿಗೇ ಬಾಲ್ ಎಸೆಯಲು ಹೊರಟ ರವೀಂದ್ರ ಜಡೇಜಾ ಫನ್ನಿ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಿನ್ನೆಯ ಪಂದ್ಯವನ್ನು ಟೀಂ ಇಂಡಿಯಾ 4 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 304 ರನ್ ಗಳಿಸಿತ್ತು. ಇಂಗ್ಲೆಂಡ್ ಬ್ಯಾಟಿಂಗ್ ವೇಳೆ ಫನ್ನಿ ಘಟನೆಯೊಂದು ನಡೆದಿದ್ದು ಅದರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇಂಗ್ಲೆಂಡ್ ಸ್ಪೋಟಕ ಬ್ಯಾಟಿಂಗ್ ನಡೆಸುತ್ತಿದ್ದಾಗ ವಿಕೆಟ್ ಕಿತ್ತು ಪಂದ್ಯ ನಿಯಂತ್ರಣಕ್ಕೆ ತಂದಿದ್ದು ರವೀಂದ್ರ ಜಡೇಜಾ. ಅವರು ಫೀಲ್ಡಿಂಗ್ ನಲ್ಲೂ ಅವರು ಚುರುಕು ಎನ್ನುವುದು ಎಲ್ಲರಿಗೂ ಗೊತ್ತೇ ಇರುವ ವಿಚಾರ. ನಿನ್ನೆಯ ಪಂದ್ಯದಲ್ಲೂ 45 ನೇ ಓವರ್ ನಲ್ಲಿ ಇಂಗ್ಲೆಂಡ್ ಬ್ಯಾಟಿಗ ಲಿವಿಂಗ್ ಸ್ಟೋನ್ ಹೊಡೆದ ಚೆಂಡನ್ನು ಹಿಡಿದರು.
ಇನ್ನೇನು ಚೆಂಡು ಹಿಡಿದು ವಿಕೆಟ್ ನತ್ತ ಎಸೆಯಬೇಕು ಎನ್ನುವಾಗ ಸ್ಕ್ವೇರ್ ಲೆಗ್ ಅಂಪಾಯರ್ ಒಂದಿಂಚೂ ಕದಲದೇ ಅಲ್ಲೇ ಇದ್ದರು. ಅಂಪಾಯರ್ ಗಮನಿಸದ ಜಡೇಜಾ ಅವರ ಹಿಂಭಾಗಕ್ಕೆ ಇನ್ನೇನು ಚೆಂಡು ಎಸೆಯುವವರಿದ್ದರು. ಅಷ್ಟರಲ್ಲಿ ಅವರಿಗೆ ಅರಿವಾಗಿತ್ತು. ಆದರೆ ಚೆಂಡು ಎಸೆಯಲು ಸಾಧ್ಯವಾಗದೇ ಇದ್ದಿದ್ದಕ್ಕೆ ಅಂಪಾಯರ್ ಕಡೆಗೆ ಕೈ ತೋರಿಸಿ ಅಯ್ಯೋ ನಿನ್ನ ಎಂದು ನಗುತ್ತಾ ಹೋದರು. ಅಂಪಾಯರ್ ಮೊಗದಲ್ಲೂ ಮಂದಹಾಸವಿತ್ತು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.