ಕಟಕ್: ಇಂಗ್ಲೆಂಡ್ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಶತಕ ಗಳಿಸುವುದರೊಂದಿಗೆ ಒಂದೇ ಇನಿಂಗ್ಸ್ ನಿಂದ ಹಲವು ಪ್ರಶ್ನೆಗಳಿಗೆ ಉತ್ತರ ಕೊಟ್ಟಂತಾಗಿದೆ.
ಈ ಸರಣಿಗೆ ಮೊದಲು ರೋಹಿತ್ ನ್ಯೂಜಿಲೆಂಡ್, ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆಡಿದ್ದರು. ಎಲ್ಲಾ ಪಂದ್ಯಗಳಲ್ಲೂ ಅವರು ಸತತವಾಗಿ ವೈಫಲ್ಯಕ್ಕೊಳಗಾಗಿದ್ದರು. ಎಷ್ಟೆಂದರೆ ನೆಟ್ ಬೌಲರ್ ಗಳ ಕೈಯಲ್ಲೂ ಔಟಾಗುತ್ತಿದ್ದಾರೆ ಎಂದು ಟೀಕೆಗೊಳಗಾಗಿದ್ದರು.
ಈ ನಡುವೆ ಮೊನ್ನೆ ಮೊನ್ನೆಯಷ್ಟೇ ರೋಹಿತ್ ನಿವೃತ್ತಿಗೆ ಬಿಸಿಸಿಐ ಗಡುವು ವಿಧಿಸಿದ ಸುದ್ದಿ ಬಂದಿತ್ತು. ಚಾಂಪಿಯನ್ಸ್ ಟ್ರೋಫಿ ಬಳಿಕ ರೋಹಿತ್ ನಿವೃತ್ತಿಯಾಗಲಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಇದು ರೋಹಿತ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು.
ಆದರೆ ಈಗ ಒಂದು ಶತಕದಿಂದ ರೋಹಿತ್ ಹಲವು ಅನುಮಾನ ನಿವಾರಸಿದ್ದಾರೆ. ಸದ್ಯಕ್ಕೆ ರೋಹಿತ್ ನಿವೃತ್ತಿಯ ರೂಮರ್ ಗಳಿಗೆ ವಿಶ್ರಾಂತಿ ಸಿಗಬಹುದು. ಆದರೆ ನಾಯಕತ್ವ ತ್ಯಜಿಸಿ ಕೇವಲ ಬ್ಯಾಟಿಂಗ್ ಕಡೆಗೆ ಮಾತ್ರ ಗಮನಕೊಡಲು ತೀರ್ಮಾನಿಸಬಹುದು.
ರೋಹಿತ್ ಕಳಪೆ ಫಾರ್ಮ್ ಮತ್ತು ನಾಯಕತ್ವದಿಂದ ತಂಡದಲ್ಲಿ ಅವರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂಬ ಸುದ್ದಿಗಳೂ ಇತ್ತು. ಅದೆಲ್ಲವೂ ಈಗ ಕೊನೆಯಾದಂತಾಗಿದೆ. ಇಂದಿನ ಅವರ ಇನಿಂಗ್ಸ್ ನಲ್ಲಿ ಟಿಪಿಕಲ್ ರೋಹಿತ್ ಶೈಲಿ ಕಂಡುಬಂದಿದ್ದು ನಾಯಕನಾಗಿ ಇಲ್ಲದೇ ಇದ್ದರೂ ಆಟಗಾರನಾಗಿಯಾದರೂ ಕೆಲವು ಸರಣಿಗಳಲ್ಲಿ ಮುಂದುವರಿಯುವುದು ಖಚಿತ ಎನ್ನಬಹುದು.