ಕಟಕ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಪಂದ್ಯದ ನಡುವೆ ಡಗ್ ಔಟ್ ನಲ್ಲಿ ಕುಳಿತಿದ್ದ ಹರ್ಷಿತ್ ರಾಣಾ ಮಕ್ಕಳಿಗೆ ಆಪಲ್ ಕೊಟ್ಟ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಳೆದ ಪಂದ್ಯದಲ್ಲಿ ಹರ್ಷಿತ್ ರಾಣಾ ಡಗ್ ಔಟ್ ನಲ್ಲಿ ಕುಳಿತಿದ್ದಾಗ ಮಕ್ಕಳ ಗುಂಪೊಂದು ಅವರನ್ನು ಮಾತನಾಡಿಸಲು ಯತ್ನಿಸಿದೆ. ಎಲ್ಲಾ ಚಿಕ್ಕ ಪುಟ್ಟ ಮಕ್ಕಳು. ಕ್ರಿಕೆಟ್ ಮೇಲಿನ ಪ್ರೀತಿಯಿಂದ ಪಂದ್ಯ ನೋಡಲು ಬಂದಿದ್ದವರು.
ತಮ್ಮನ್ನು ಕಂಡು ಕಿರುಚಾಡುತ್ತಿದ್ದ ಮಕ್ಕಳತ್ತ ಹರ್ಷಿತ್ ರಾಣಾ ಆಪಲ್ ಎಸೆದು ಅವರನ್ನು ಖುಷಿಪಡಿಸಿದರು. ಅತ್ತ ಮಕ್ಕಳೂ ಆಪಲ್ ಕ್ಯಾಚ್ ಪಡೆದು ಖುಷಿಗೊಂಡರು.
ಐಪಿಎಲ್ ಮೂಲಕ ಬೆಳಕಿಗೆ ಬಂದ ಪ್ರತಿಭೆ ಹರ್ಷಿತ್ ರಾಣಾ ಈಗ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಿಂದಲೇ ಬೌಲಿಂಗ್ ನಲ್ಲಿ ಭರವಸೆ ಮೂಡಿಸಿದ್ದಾರೆ.