Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಗೆ ಸ್ಪೆಷಲ್ ಫುಡ್, ಬಿಸಿಸಿಐ ನಿಯಮ ಕಿಂಗ್ ಗೆ ಅಪ್ಲೈ ಆಗಲ್ವಾ

Virat Kohli

Krishnaveni K

ದುಬೈ , ಸೋಮವಾರ, 17 ಫೆಬ್ರವರಿ 2025 (11:04 IST)
ದುಬೈ: ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ದುಬೈಗೆ ಬಂದಿಳಿದಿರುವ ಟೀಂ ಇಂಡಿಯಾಗೆ ಬಿಸಿಸಿಐ ಕೆಲವೊಂದು ಕಠಿಣ ನಿಯಮಗಳನ್ನು ವಿಧಿಸಿದೆ. ಆದರೆ ವಿರಾಟ್ ಕೊಹ್ಲಿಗೆ ಮಾತ್ರ ವಿಶೇಷ ಆಹಾರ ವ್ಯವಸ್ಥೆ ಮಾಡಲಾಗಿದ್ದು ಕೊಹ್ಲಿ ಈ ನಿಯಮ ಅನ್ವಯವಾಗಲ್ವಾ ಎಂದು ಪ್ರಶ್ನಿಸುವಂತಾಗಿದೆ.

ಟೀಂ ಇಂಡಿಯಾದ ಯಾವುದೇ ಆಟಗಾರರೂ ದುಬೈನಲ್ಲಿ ವಿಶೇಷ ಕುಕ್ ಇಟ್ಟುಕೊಳ್ಳಬಾರದು. ಎಲ್ಲರೂ ಒಂದೇ ರೀತಿಯ ಆಹಾರ ಸೇವನೆ ಮಾಡಬೇಕು ಎಂಬುದು ನಿಯಮಗಳಲ್ಲಿ ಒಂದಾಗಿದೆ.

ಆದರೆ ದುಬೈಗೆ ಬಂದಿಳಿದ ತಕ್ಷಣ ವಿರಾಟ್ ಕೊಹ್ಲಿ ಲೋಕಲ್ ಮ್ಯಾನೇಜರ್ ಜೊತೆ ಕೆಲವು ಕ್ಷಣ ಮಾತುಕತೆ ನಡೆಸಿದ್ದಾರೆ. ಅದಾದ ಬಳಿಕ ಅವರಿಗೆ ಪ್ರತ್ಯೇಕ ಆಹಾರದ ಪಾರ್ಸೆಲ್ ಬಂದಿದೆ. ಬಿಸಿಸಿಐ ಅನುಮೋದನೆಯಿಲ್ಲದೇ ಯಾವುದೇ ಆಟಗಾರರೂ, ಸಿಬ್ಬಂದಿಗಳೂ ಪರ್ಸನಲ್ ಕೋಚ್, ಭದ್ರತಾ ಸಿಬ್ಬಂದಿಗಳು, ಸಹಾಯಕರನ್ನು ಕರೆದೊಯ್ಯುವಂತಿಲ್ಲ ಎಂದು ನಿಯಮವಿದೆ.

ವಿರಾಟ್ ಕೊಹ್ಲಿ ಡಯಟ್ ವಿಚಾರದಲ್ಲಿ ಕಟ್ಟುನಿಟ್ಟು. ಈಗ ತಮ್ಮ ಆಹಾರ ವಿಚಾರದಲ್ಲಿ ಬಿಸಿಸಿಐನಿಂದ ವಿಶೇಷ ಅನುಮತಿ ಪಡೆದುಕೊಂಡಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟಿಗರು ದೇವಮಾನವರಲ್ಲ: ಸೂಪರ್‌ ಸ್ಟಾರ್‌ ಸಂಸ್ಕೃತಿ ವಿರುದ್ಧ ಅಶ್ಚಿನ್‌ ಕೆಂಡಾಮಂಡಲ