Select Your Language

Notifications

webdunia
webdunia
webdunia
webdunia

TATA WPL 2025: ಗುಜರಾತ್ ಗೆ ಕಡಿವಾಣ ಹಾಕಿ ಕೊನೆಗೂ ಹಳಿಗೆ ಬಂದ ಮುಂಬೈ ವನಿತೆಯರು

Mumbai Indians

Krishnaveni K

ವಡೋದರಾ , ಮಂಗಳವಾರ, 18 ಫೆಬ್ರವರಿ 2025 (21:21 IST)
Photo Credit: X
ವಡೋದರಾ: ಡಬ್ಲ್ಯುಪಿಎಲ್ ನ ಇಂದಿನ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಕೇವಲ 120 ರನ್ ಗಳಿಗೆ ಕಟ್ಟಿ ಹಾಕಿದ ಮುಂಬೈ ಕೊನೆಗೂ ಟೂರ್ನಿಯಲ್ಲಿ ಹಳಿಗೆ ಬಂದಿದೆ.

ಪ್ರಬಲ ಮುಂಬೈ ಯಾಕೋ ಕಳೆದ ಪಂದ್ಯದಲ್ಲಿ ಕೊಂಚ ಮಂಕಾಗಿತ್ತು. ಡೆಲ್ಲಿ ವಿರುದ್ಧ ನಾಟಕೀಯ ಸೋಲು ಅನುಭವಿಸಿದ ಬಳಿಕ ಮುಂಬೈ ಈ ಗುಜರಾತ್ ವಿರುದ್ಧ ಇಂದಿನ ಪಂದ್ಯದಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದೆ.

ಇಂದು ಟಾಸ್ ಗೆದ್ದ ಮುಂಬೈ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಗುಜರಾತ್ ಗೆ ಟಾಪ್ ಆರ್ಡರ್ ಬ್ಯಾಟಿಗರು ಕೈಕೊಟ್ಟರು. ಈ ವೇಳೆ ಹರ್ಲಿನ್ ಡಿಯೋಲ್ 32, ಕಶ್ವೀ ಗೌತಮ್ 20 ರನ್ ಗಳಿಸಿ ಆಧಾರವಾದರು. ಬಹುಶಃ ಇವರಿಬ್ಬರ ಬ್ಯಾಟಿಂಗ್ ಇಲ್ಲದೇ ಹೋಗಿದ್ದರೆ ಗುಜರಾತ್ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗುತ್ತಿತ್ತು. ಆದರೆ ಅಂತಿಮವಾಗಿ 20 ಓವರ್ ಗಳಲ್ಲಿ 120 ರನ್ ಗಳಿಗೆ ಆಲೌಟ್ ಆಯಿತು.

ಮುಂಬೈ ಪರ ಹೀಲೇ ಮ್ಯಾಥ್ಯೂಸ್ 3, ಸಿವರ್ ಬ್ರಂಟ್, ಅಮೆಲಿಯಾ ಕೆರ್ ತಲಾ 2, ಶಬ್ನಿಮ್ ಇಸ್ಮೈಲ್ ಮತ್ತು ಅಮನ್ಜೋತ್ ಕೌರ್ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

TATA WPL 2025: ಆರ್ ಸಿಬಿ ಹುಡುಗರ ಟೀಂಗೆ ಎಬಿಡಿ ಬದಲು ರಿಚಾ ಘೋಷ್ ರನ್ನು ಹಾಕ್ರೋ