Select Your Language

Notifications

webdunia
webdunia
webdunia
webdunia

ಭಾರತ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಸೋಲಿಗೆ ಹರ್ಮನ್ ಪ್ರೀತ್ ಕೌರ್ ತಲೆದಂಡ

Harmanpreet Kaur

Krishnaveni K

ಮುಂಬೈ , ಬುಧವಾರ, 16 ಅಕ್ಟೋಬರ್ 2024 (12:31 IST)
ಮುಂಬೈ: ಮಹಿಳೆಯರ ಟಿ20 ವಿಶ್ವಕಪ್ ನಲ್ಲಿ ಭಾರತ ವನಿತೆಯರ ನೀರಸ ಪ್ರದರ್ಶನಕ್ಕೆ ಈಗ ನಾಯಕಿ ಹರ್ಮನ್ ಪ್ರೀತ್ ಕೌರ್ ತಲೆದಂಡವಾಗುವ ಸಾಧ್ಯತೆಯಿದೆ ಎಂಬ ಮಾತು ಕೇಳಿಬರುತ್ತಿದೆ.

ಮಿಥಾಲಿ ರಾಜ್ ಬಳಿಕ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾದರು. ಮಿಥಾಲಿ ರಾಜ್ ಗೆ ಹೋಲಿಸಿದರೆ ಹರ್ಮನ್ ಆಕ್ರಮಣಕಾರೀ ಆಟಗಾರ್ತಿ. ತಮ್ಮ ತಂಡದಲ್ಲೂ ಅದೇ ಉತ್ಸಾಹ ತುಂಬುತ್ತಾರೆ ಎಂದು ನಂಬಲಾಗಿತ್ತು. ಆದರೆ ಮಹಿಳಾ ಕ್ರಿಕೆಟ್ ತಂಡ ಸುಧಾರಿಸಿಯೇ ಇಲ್ಲ.

ಇದಕ್ಕೆ ಕೇವಲ ಹರ್ಮನ್ ಮಾತ್ರ ಕಾರಣವಲ್ಲ. ಇತ್ತೀಚೆಗೆ ಟಿ20 ವಿಶ್ವಕಪ್ ನಲ್ಲೂ ವೈಯಕ್ತಿಕವಾಗಿ ಅವರು ಚೆನ್ನಾಗಿಯೇ ಆಡಿದ್ದರು. ಆದರೆ ನಾಯಕಿಯಾಗಿ ಅವರು ಸೋತರು. ಹೀಗಾಗಿ ಅವರನ್ನು ನಾಯಕತ್ವದಿಂದಲೇ ಕಿತ್ತು ಹಾಕುವ ಬಗ್ಗೆ ಈಗ ಬಿಸಿಸಿಐ ಗಂಭೀರ ಚಿಂತನೆ ನಡೆಸಿದೆ.

ಸದ್ಯದಲ್ಲೇ ಮುಖ್ಯ ಕೋಚ್ ಅಮೋಲ್ ಮಜುಂದಾರ್ ಜೊತೆ ಈ ಬಗ್ಗೆ ಬಿಸಿಸಿಐ ಆಯ್ಕೆ ಸಮಿತಿ ಚರ್ಚೆ ನಡೆಸಲಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಹರ್ಮನ್ ಹೊರತುಪಡಿಸಿದರೆ ತಂಡಕ್ಕೆ ಮುಂದಿನ ನಾಯಕಿ ಯಾರಾಗುತ್ತಾರೆ ಎಂಬ ದೊಡ್ಡ ಪ್ರಶ್ನೆಯಿದೆ. ಹರ್ಮನ್ ಬಳಿಕ ತಂಡದ ಸೀನಿಯರ್ ಆಟಗಾರ್ತಿ ಎಂದರೆ ಸ್ಮೃತಿ ಮಂಧಾನಾ. ಆದರೆ ಅವರು ಮಹತ್ವದ ಟೂರ್ನಿಗಳಲ್ಲೇ ಕೈ ಕೊಡುತ್ತಾರೆ ಎಂಬ ಅಪವಾದವಿದೆ. ಅವರನ್ನು ಹೊರತುಪಡಿಸಿದರೆ ತಂಡದಲ್ಲಿ ಅನುಭವಿ ಆಟಗಾರ್ತಿಯರಿಲ್ಲ. ಹೀಗಾಗಿ ಹೊಸ ನಾಯಕಿಯ ಆಯ್ಕೆಯೂ ಬಿಸಿಸಿಐಗೆ ಸುಲಭವಲ್ಲ. ಆದರೆ ಹರ್ಮನ್ ತಲೆದಂಡ ಮಾತ್ರ ಬಹುತೇಕ ನಿಶ್ಚಿತ ಎಂಬ ಮಾತು ಕೇಳಿಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs NZ Test: ಬೆಂಗಳೂರು ಪಂದ್ಯ ವಾಶ್ ಔಟ್ ಆದರೆ ಟೀಂ ಇಂಡಿಯಾದ ಡಬ್ಲ್ಯುಟಿಸಿ ಕತೆ ಏನಾಗಲಿದೆ