Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಜೊತೆ ನನ್ನ ಹೋಲಿಸಬೇಡಿ: ಸ್ಮೃತಿ ಮಂಧಾನಾ ಖಡಕ್ ಹೇಳಿಕೆ

Smriti Mandhana

Krishnaveni K

ಮುಂಬೈ , ಶನಿವಾರ, 10 ಆಗಸ್ಟ್ 2024 (15:58 IST)
ಮುಂಬೈ: ಟೀಂ ಇಂಡಿಯಾ ದಿಗ್ಗಜ ವಿರಾಟ್ ಕೊಹ್ಲಿ ಜೊತೆ ನನ್ನ ಹೋಲಿಕೆ ಮಾಡಬೇಡಿ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನಾ ಖಡಕ್ ಆಗಿ ಹೇಳಿದ್ದಾರೆ.

ವಿರಾಟ್ ಕೊಹ್ಲಿಯನ್ನು ಅಭಿಮಾನಿಗಳು ಕಿಂಗ್ ಎಂದು ಕರೆದರೆ ಸ್ಮತಿ ಮಂಧಾನಾರನ್ನು ಕ್ವೀನ್ ಎಂದು ಕರೆಯುತ್ತಾರೆ. ಕೊಹ್ಲಿಯಂತೇ ಸ್ಮೃತಿ ಕೂಡಾ ಸಾಕಷ್ಟು ಅಭಿಮಾನಿಗಳು ಹೊಂದಿದ್ದಾರೆ. ಅವರದ್ದೇ ಜೆರ್ಸಿ ನಂಬರ್ 18 ರನ್ನು ತಾವು ಹಾಕಿಕೊಳ್ಳುತ್ತಾರೆ. ಅವರಂತೇ ಅಪರೂಪಕ್ಕೆ ಬೌಲಿಂಗ್ ಮಾಡಿ ವಿಕೆಟ್ ಕಿತ್ತಿದ್ದಾರೆ. ಆರ್ ಸಿಬಿ ತಂಡದ ನಾಯಕಿ.

ಹೀಗಾಗಿ ಅವರನ್ನು ಕೊಹ್ಲಿ ಜೊತೆಗೆ ಕಂಪೇರ್ ಮಾಡುತ್ತಾರೆ. ಆದರೆ ಈ ಹಿಂದೆ ಆರ್ ಸಿಬಿ ಡಬ್ಲ್ಯುಪಿಎಲ್ ಗೆದ್ದಾಗಲೇ ಸ್ಮೃತಿ ನನ್ನನ್ನು ಕೊಹ್ಲಿ ಜೊತೆ ಕಂಪೇರ್ ಮಾಡಬೇಡಿ ಎಂದಿದ್ದರು. ಈಗ ಮತ್ತೆ ಅದೇ ಮಾತನ್ನು ಹೇಳಬೇಡಿ. ವಿರಾಟ್ ಕೊಹ್ಲಿ ಜೊತೆ ನನ್ನನ್ನು ಹೋಲಿಕೆ ಮಾಡಬೇಡಿ ಎಂದಿದ್ದಾರೆ.

‘ನಾನು 18 ನಂಬರ್ ಜೆರ್ಸಿ ತೊಡುತ್ತಾರೆ ಎಂಬ ಕಾರಣಕ್ಕೆ ಅವರ ಜೊತೆಗೆ ನನ್ನ ಹೋಲಿಕೆ ಮಾಡಬೇಡಿ. ವಿರಾಟ್ ಕೊಹ್ಲಿ ಕ್ರಿಕೆಟ್ ನಲ್ಲಿ ಅನೇಕ ಸಾಧನೆಗಳನ್ನು ಮಾಡಿದವರು. ಅವರ ಜೊತೆ ನನ್ನ ಹೋಲಿಕೆ ಮಾಡುವುದು ನನಗೆ ಇಷ್ಟವಾಗಲ್ಲ’ ಎಂದು ಖಡಕ್ ಆಗಿಯೇ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಾಯ್ನಾಡಿಗೆ ವಾಪಾಸ್ಸಾಗಲು ವಿಮಾನವೇರಿದ ಹಾಕಿ ತಂಡಕ್ಕೆ ವಿಮಾನದಲ್ಲೇ ಕಾದಿತ್ತು ಬಿಗ್ ಸರ್ಪ್ರೈಸ್‌