Select Your Language

Notifications

webdunia
webdunia
webdunia
webdunia

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಮಾಡಿದ ಶಫಾಲಿ ವರ್ಮ

Shafali Verma

Krishnaveni K

ದಂಬುಲಾ , ಬುಧವಾರ, 24 ಜುಲೈ 2024 (11:31 IST)
Photo Credit: BCCI
ದಂಬುಲಾ: ಮಹಿಳೆಯರ ಏಷ್ಯಾ ಕಪ್ ಟೂರ್ನಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ನೇಪಾಳ ವಿರುದ್ಧ ಗೆಲುವಿನ ರೂವಾರಿಯಾದ ಭಾರತ ತಂಡದ ಶಫಾಲಿ ವರ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಮಾಡಿದ್ದಾರೆ.

ಭಾರತ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮ  ಈ ಪಂದ್ಯದಲ್ಲಿ 48 ಎಸೆತಗಳಿಂದ 12 ಬೌಂಡರಿ, 1 ಸಿಕ್ಸರ್ ಸಹಿತ 81 ರನ್ ಚಚ್ಚಿದ್ದರು. ಭಾರತ ಈ ಪಂದ್ಯವನ್ನು 82 ರನ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿತು. ಈ ಮೂಲಕ ಸೆಮಿಫೈನಲ್ ಗೆ ಅರ್ಹತೆ ಪಡೆಯಿತು. ಮೊದಲು ಬ್ಯಾಟಿಂಗ್ಮ ಾಡಿದ್ದ ಭಾರತ 20  ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿದರೆ ನೇಪಾರಳ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಲಷ್ಟೇ ಶಕ್ತವಾಯಿತು.

ಈ ಗೆಲುವಿನ ರೂವಾರಿಯಾಗಿದ್ದ ಶಫಾಲಿ ವರ್ಮ. ತಮ್ಮ ಹೊಡೆಬಡಿಯ ಶೈಲಿಯ ಆಟವಾಡಿದ ಶಫಾಲಿ ದೊಡ್ಡ ಮೊತ್ತ ಗಳಿಸಲು ನೆರವಾದರು. ಅವರು ಇದೀಗ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 3000 ರನ್ ಪೂರೈಸಿದ ದಾಖಲೆ ಮಾಡಿದರು. ಸ್ಮೃತಿ ಮಂಧಾನಾ, ಹರ್ಮನ್ ಪ್ರೀತ್ ಕೌರ್ ಬಳಿಕ ಶಫಾಲಿ ಭಾರತ ಮಹಿಳಾ ತಂಡದ ಅಪ್ರತಿಮ ಆಟಗಾರ್ತಿಯಾಗಿದ್ದಾರೆ.

ಕೇವಲ 20 ವರ್ಷ ವಯಸ್ಸಿನಲ್ಲೆ ಶಫಾಲಿ ಈ ದಾಖಲೆ ಮಾಡಿದ್ದಾರೆ. ಟೆಸ್ಟ್, ಏಕದಿನ, ಟಿ20 ಮೂರೂ ಮಾದರಿಯಲ್ಲಿ ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿಯುವ ಶಫಾಲಿಯನ್ನು ಲೇಡಿ ಸೆಹ್ವಾಗ್ ಎಂದೂ ಕರೆಯಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕೋಚ್ ಆಗಿ ಗಂಭೀರ್ ಡ್ಯೂಟಿ ಶುರು: ರಾಹುಲ್ ದ್ರಾವಿಡ್ ನೆನೆಸಿಕೊಂಡ ನೆಟ್ಟಿಗರು