Select Your Language

Notifications

webdunia
webdunia
webdunia
webdunia

ಸ್ಮೃತಿ ಮಂದಾನಾ ಜೊತೆ ಫೋಟೋ ತೆಗೆಸಿಕೊಳ್ಳಲು ನೇಪಾಳ ಆಟಗಾರ್ತಿಯರ ಕ್ಯೂ

Smriti Mandhana

Krishnaveni K

ದಂಬುಲಾ , ಬುಧವಾರ, 24 ಜುಲೈ 2024 (11:00 IST)
ದಂಬುಲಾ: ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂದಾನಾ ಈಗ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಶ್ರೀಲಂಕಾದಲ್ಲಿದ್ದು ಅವರ ಜನಪ್ರಿಯತೆ ಎಷ್ಟಿದೆ ಎನ್ನುವುದಕ್ಕೆ ಇತ್ತೀಚೆಗಿನ ಕೆಲವು ಘಟನೆಗಳೇ ಸಾಕ್ಷಿಯಾಗಿದೆ.

ಸ್ಮೃತಿ ಮಂದಾನಾರನ್ನು ಭಾರತೀಯ ಮಹಿಳಾ ಕ್ರಿಕೆಟ್ ನ ಕ್ವೀನ್ ಎಂದೇ ಕರೆಯಲಾಗುತ್ತದೆ. ಅದು ಕೇವಲ ಆಕೆಯ ಸೌಂದರ್ಯಕ್ಕೆ ಅಲ್ಲ, ಆಕೆಯ ಆಟದ ವೈಖರಿಯನ್ನೂ ನೋಡಿ ಅಭಿಮಾನಿಗಳು ನೀಡಿರುವ ಬಿರುದು. ವಿಶ್ವದ ಟಾಪ್ ಮಹಿಳಾ ಆಟಗಾರ್ತಿಯರಲ್ಲಿ ಒಬ್ಬರಾಗಿರುವ ಸ್ಮೃತಿಗೆ ಶ್ರೀಲಂಕಾದಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ.

ಮೊನ್ನೆಯಷ್ಟೇ ಯುಎಇ ವಿರುದ್ದದ ಪಂದ್ಯದ ವೇಳೆ ಶ್ರೀಲಂಕಾ ಮೂಲದ ವಿಕಲಚೇತನ ಬಾಲಕಿಯೊಬ್ಬಳು ಸ್ಮೃತಿಯನ್ನು ನೋಡಲೆಂದೇ ಮೈದಾನಕ್ಕೆ ಬಂದಿದ್ದರು. ಬಳಿಕ ಸ್ಮೃತಿ ಆಕೆಯನ್ನು ಭೇಟಿ ಮಾಡಿ ಉಡುಗೊರೆ ಕೊಟ್ಟಿದ್ದಲ್ಲದೆ, ಫೋಟೋ ತೆಗೆಸಿಕೊಂಡು ಖುಷಿಪಡಿಸಿದ್ದರು.

ಕೇವಲ ಅಭಿಮಾನಿಗಳು ಮಾತ್ರವಲ್ಲ, ವಿದೇಶೀ ತಂಡದವರೂ ಸ್ಮೃತಿ ಅಭಿಮಾನಿಗಳೇ. ನಿನ್ನೆ ನೇಪಾಳ ವಿರುದ್ಧದ ಪಂದ್ಯದ ಬಳಿಕ ನೇಪಾಳಿ ಆಟಗಾರ್ತಿಯರು ಒಬ್ಬೊರಾಗಿ ಕ್ಯೂನಲ್ಲಿ ಬಂದು ಸ್ಮೃತಿ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಎಲ್ಲರ ಜೊತೆಗೂ ನಗು ನಗುತ್ತಲೇ ಸ್ಮೃತಿ ಒಬ್ಬರಾದ ಮೇಲೊಬ್ಬರಂತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇವರ ಮೇಲಿನ ಕ್ರೇಜ್ ನೋಡುತ್ತಿದ್ದರೆ ವಿರಾಟ್ ಕೊಹ್ಲಿಯನ್ನು ನೋಡಿದಂತೇ ಆಗುತ್ತದೆ ಎಂದಿದ್ದಾರೆ ನೆಟ್ಟಿಗರು.

Share this Story:

Follow Webdunia kannada

ಮುಂದಿನ ಸುದ್ದಿ

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ ಶುರು, ಪಂದ್ಯಗಳನ್ನು ಉಚಿತವಾಗಿ ಲೈವ್ ಆಗಿ ಎಲ್ಲಿ ವೀಕ್ಷಿಸಬೇಕು