ಮುಂಬೈ: ಐಪಿಎಲ್ ಸಂದರ್ಭದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸಾಮಾನ್ಯವಾಗಿ ಬಿಸಿಸಿಐ ಯಾವುದೇ ಜವಾಬ್ಧಾರಿ ನೀಡುವುದಿಲ್ಲ. ಆದರೆ ಈ ಬಾರಿ ಐಪಿಎಲ್ ನಡುವೆಯೂ ಕ್ರಿಕೆಟಿಗರು ಹೊಸ ಟಾಸ್ಕ್ ಗೆ ಸಿದ್ಧವಾಗಬೇಕಿದೆ.
ಐಪಿಎಲ್ ಮಾರ್ಚ್ 22 ರಿಂದ ಮೇ 25 ರವರೆಗೆ ಐಪಿಎಲ್ ಟೂರ್ನಿ ನಡೆಯಲಿದೆ. ಆದರೆ ಇದರ ನಡುವೆಯೂ ಟೀಂ ಇಂಡಿಯಾ ಆಟಗಾರರು ಕೆಂಪು ಚೆಂಡಿನ ಆಟಕ್ಕೆ ಸಿದ್ಧತೆ ನಡೆಸಬೇಕಿದೆ. ಐಪಿಎಲ್ ವೇಳಾಪಟ್ಟಿ ನಡುವೆ ಕೆಲವು ಕೀ ಆಟಗಾರರಿಗೆ ಕೆಂಪು ಚೆಂಡಿನಲ್ಲಿ ಅಭ್ಯಾಸ ಆಯೋಜಿಸಲಾಗುತ್ತದೆ.
ಐಪಿಎಲ್ ಮುಗಿದೊಡನೇ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲು ತೆರಳಬೇಕಾಗುತ್ತದೆ. ಈ ಕಾರಣಕ್ಕೆ ಬಿಸಿಸಿಐ ಟೀಂ ಇಂಡಿಯಾ ಆಟಗಾರರಿಗೆ ಐಪಿಎಲ್ ನಡುವೆಯೂ ಟೆಸ್ಟ್ ಪ್ರಾಕ್ಟೀಸ್ ನೀಡಲಿದೆ.
ಇತ್ತೀಚೆಗಿನ ಸರಣಿಗಳಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಆಟಗಾರರು ಪರದಾಡುತ್ತಿದ್ದರು. ಇದಕ್ಕೆ ಹಿರಿಯ ಕ್ರಿಕೆಟಿಗರೂ ಹೊರತಾಗಿಲ್ಲ. ಹೀಗಾಗಿ ಆಟಗಾರರಿಗೆ ಟೆಸ್ಟ್ ಸರಣಿಗೆ ವಿಶೇಷ ಅಭ್ಯಾಸ ನಡೆಸಲು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.