ಬೆಂಗಳೂರು: ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯುತ್ತಿರುವ ಇಂದಿನ ಐಪಿಎಲ್ ಪಂದ್ಯಾಟದಲ್ಲಿ ಮುಂಬೈ ಇಂಡಿಯನ್ಸ್ ಬಿಗ್ ಟಾರ್ಗೆಟ್ ನೀಡಿದೆ.
20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 217 ರನ್ ಗಳಿಸಿ, ಆರ್‌ಆರ್‌ಗೆ 218ರನ್‌ಗಳ ಗೆಲುವಿನ ಗುರಿ ನೀಡಿದೆ.
ಎಂಐ ಪರ ರಯಾನ್ ರಿಕಲ್ಟನ್ 61 ರನ್ ಗಳಿಸಿದರೆ ರೋಹಿತ್ ಶರ್ಮಾ 53 ರನ್ ಗಳಿಸಿದರು. ನಂತರ ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ತಲಾ 48* ರನ್ ಗಳಿಸಿದರು. ಆರ್‌ಆರ್ ಪರ ಮಹೇಶ್ ತೀಕ್ಷಣ ಮತ್ತು ರಿಯಾನ್ ಪರಾಗ್ ತಲಾ ಒಂದು ವಿಕೆಟ್ ಪಡೆದರು. ಎಂಐ ನೀಡಿದ ಬಿಗ್‌ಟಾರ್ಗೆಟ್ ಅನ್ನು ಚೇಸ್ ಮಾಡಬೇಕಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಾಟದಲ್ಲಿ 35ಎಸೆತಗಳಲ್ಲಿ ಸೆಂಚುರಿ ಬಾರಿಸಿ ಗಮನಸೆಳೆದಿದ್ದ ವೈಭವ್ ಸೂರ್ಯವಂಶಿ ಒಂದು ರನ್ ಗಳಿಸದೆ ಪೆವೆಲಿಯನ್ ಕಡೆ ಮರಳಿದ್ದು, ರಾಜಸ್ಥಾನ್ ರಾಯಲ್ಸ್‌ಗೆ ಶಾಕ್ ನೀಡಿದೆ.