ನವದೆಹಲಿ: ಶನಿವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಸೋಲು ಅನುಭವಿಸಿದರು, ಯುವ ಆಟಗಾರ ವೈಭವ್ ಸೂರ್ಯವಂಶಿ ವಿಶೇಷವಾಗಿ ಗಮನ ಸೆಳೆದರು.
ಕೇವಲ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಅವರು ಚೊಚ್ಚಲ ಐಪಿಎಲ್ ಪಂದ್ಯಾಟದಲ್ಲಿ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದರು. 20 ಎಸೆತಗಳಲ್ಲಿ 34 ರನ್ ಗಳಿಸುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಅನೇಕರ ಗಮನವನ್ನು ಸೆಳೆದರು. ಶಾರ್ದೂಲ್ ಠಾಕೂರ್ ಅವರ ಬೌಲಿಂಗ್‌ಗೆ ಸಿಕ್ಸರ್‌ನೊಂದಿಗೆ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಕಳೆದ ವರ್ಷ ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್‌ನಿಂದ INR 1.1 ಕೋಟಿಗೆ ಖರೀದಿಸಲ್ಪಟ್ಟ ಸೂರ್ಯವಂಶಿ ಐಪಿಎಲ್ ಚೊಚ್ಚಲ ಪಂದ್ಯಾಟಕ್ಕಾಗಿ ತಮ್ಮ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ಮಾಹಿತಿ ಪ್ರಕಾರ ಸೂರ್ಯವಂಶಿ ಮಟನ್ ಮತ್ತು ಪಿಜ್ಜಾ ಸೇವಿಸುವುದನ್ನೇ ನಿಲ್ಲಿದ್ದಾರೆ. ಸಣ್ಣ ವಯಸ್ಸಿನವನಾಗಿರು ವೈಭವ್ ಪಿಜ್ಜಾವನ್ನು ಇಷ್ಟಪಡುತ್ತಾನೆ. ಆದರೆ ಅವನ ಕ್ರಿಕೆಟ್ ಪ್ರೀತಿಗಾಗಿ ಅವೆಲ್ಲವನ್ನೂ ತಿನ್ನುವುದನ್ನು ನಿಲ್ಲಿಸಿದ್ದಾನೆ.
ತರಬೇತುದಾರ ಓಜಾ ಅವರ ಈ ಬಗ್ಗೆ ಪ್ರತಿಕ್ರಿಯಿಸಿ, ಎಡಗೈ ಆಟಗಾರ ವೈಭವ್ ಅವರನ್ನು ಯುವರಾಜ್ ಸಿಂಗ್ ಮತ್ತು ಬ್ರಿಯಾನ್ ಲಾರಾ ಅವರ ಆಟದ ಶೈಲಿಯ ಹೋಲಿಕೆಯನ್ನು ಅವರಲ್ಲಿ ಕಾಣಬಹುದು.
ಅವನು ಬಹಳ ದೂರ ಹೋಗುತ್ತಾನೆ. ಐಪಿಎಲ್ ಚೊಚ್ಚಲ ಆರಂಭದಲ್ಲೇ ಇನ್ನಿಂಗ್ಸ್ ಪ್ರಾರಂಭಿಸಿದ ರೀತಿಯನ್ನು ನಾವು ನೋಡಿದ್ದೇವೆ ಮತ್ತು ನಾನು ನಿಮಗೆ ಭರವಸೆ ನೀಡಬಲ್ಲೆ - ಮುಂಬರುವ ಪಂದ್ಯಗಳಲ್ಲಿ ಅವರು ದೊಡ್ಡ ಸ್ಕೋರ್ ಮಾಡುತ್ತಾರೆ ಎಂದರು.