Select Your Language

Notifications

webdunia
webdunia
webdunia
webdunia

GT vs DC Match:ಅಹಮಾದಾಬಾದ್‌ ಬಿಸಿಲ ತಾಪಕ್ಕೆ ಗ್ರೌಂಡ್‌ನಲ್ಲೇ ಸುಸ್ತಾದ ಇಶಾಂತ್ ಶರ್ಮಾ, ಅವಸ್ಥೆ ನೋಡಿ ಗಾಳಿ ಬೀಸಿದ ಸಹ ಆಟಗಾರರು

ಅಹಮದಾಬಾದ್ ಹವಾಮಾನ

Sampriya

ಅಹಮಾದಾಬಾದ್‌ , ಶನಿವಾರ, 19 ಏಪ್ರಿಲ್ 2025 (19:35 IST)
Photo Credit X
ಅಹಮಾದಾಬಾದ್‌: ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ 2025 ರ ಪಂದ್ಯದ ವೇಳೆ ಅಹಮದಾಬಾದ್‌ನ ಬಿಸಿಲ ತಾಪ ಆಟಗಾರನ ಮೇಲೆ ಪ್ರಬಾವ ಬೀರಿದೆ. ಅಕ್ಷರ್ ಪಟೇಲ್, ಪ್ರಸಿದ್ಧ್ ಕೃಷ್ಣ ಸೇರಿದಂತೆ ಹಲವಾರು ಆಟಗಾರರು ಬಿಸಿಲ ತಾಪಕ್ಕೆ ಸುಸ್ತಾದ ಹಾಗೇ ಕಾಣಿಸಿಕೊಂಡರು. ಅದರಲ್ಲೀ ಅನುಭವಿ ಜಿಟಿ ವೇಗಿ ಇಶಾಂತ್ ಶರ್ಮಾ ಅವರು ಹೆಚ್ಚು ಕಷ್ಟಪಟ್ಟ ಘಟನೆ ವರದಿಯಾಗಿದೆ.  

ಕೆಲ ಹೊತ್ತು ಮೈದಾನದ ಹೊರಗೆ ವಿಶ್ರಾಂತಿ ಪಡೆಯುತ್ತಿರುವುದನ್ನು ವೈರಲ್ ಆಗುತ್ತಿರುವ ವಿಡಿಯೋ, ಫೋಟೋ‌ದಲ್ಲಿ ಕಾಣಬಹುದು. ಪಂದ್ಯಾಟದ ವೇಳೆ ಬಹಳಷ್ಟು ಸಮಯದ ಬದಿಯಲ್ಲಿಯೇ ಕಾಣಿಸಿಕೊಂಡರು. ಆದರೆ, 36 ವರ್ಷ ವಯಸ್ಸಿನ ಇಶಾಂತ್ ಶರ್ಮಾ ಮೂರು ಓವರ್ ಪೂರ್ಣಗೊಳಿಸಿ ಒಂದು ವಿಕೆಟ್ ಪಡೆದರು.

ಭಾರತೀಯ ಹವಾಮಾನ ಇಲಾಖೆ (IMD) ಇಂದು ಅಹಮದಾಬಾದ್‌ನಲ್ಲಿ ಹೀಟ್‌ವೇವ್‌ಗಾಗಿ ಹಳದಿ ಎಚ್ಚರಿಕೆಯನ್ನು ನೀಡಿದೆ. ಇಂದು ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್‌ಗೆ ಏರಬಹುದು ಮತ್ತು ಕನಿಷ್ಠ ತಾಪಮಾನವು 25 ಡಿಗ್ರಿ ಸೆಲ್ಸಿಯಸ್‌ನಲ್ಲಿ ನೆಲೆಸಬಹುದು ಎಂದು ಹವಾಮಾನ ಮುನ್ಸೂಚನೆ ಇಲಾಖೆ ನೀಡಿತ್ತು.

 ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ 35 ನೇ ಮುಖಾಮುಖಿಯಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ನಾಯಕ ಶುಭಮನ್ ಗಿಲ್ ಅವರು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಗುಜರಾತ್ ಮೂಲದ ಫ್ರಾಂಚೈಸಿ ಪ್ರಸ್ತುತ ತಮ್ಮ ಆರು ಪಂದ್ಯಗಳಲ್ಲಿ ನಾಲ್ಕು ಗೆಲುವುಗಳೊಂದಿಗೆ (8 ಅಂಕಗಳು) ಮೂರನೇ ಸ್ಥಾನದಲ್ಲಿದೆ, ಆದರೆ ಅಕ್ಷರ್ ಪಟೇಲ್ ನೇತೃತ್ವದ ತಂಡವು ತಮ್ಮ ಆರು ಪಂದ್ಯಗಳಲ್ಲಿ ಐದರಲ್ಲಿ ಗೆದ್ದು (10 ಅಂಕಗಳು) ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

DCvsGT Match:ಯಾರ್ಕರ್‌ನೊಂದಿಗೆ ಕೆಎಲ್ ರಾಹುಲ್‌ ವಿಕೆಟ್ ಕಿತ್ತ ಕನ್ನಡಿಗ ಪ್ರಸಿದ್ಧ್‌ ಕೃಷ್ಣ