ಬೆಂಗಳೂರು: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ರೋಚಕ ಐಪಿಎಲ್ ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣ ಅವರ ಅಧ್ಬುತ ಬೌಲಿಂಗ್‌ಗೆ ಕೆಎಲ್ ರಾಹುಲ್ ಅವರು ಔಟ್ ಆದರು.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಕೆಎಲ್ ರಾಹುಲ್ ಅವರು ಔಟ್ ಆಗಿರುವ ರೀತಿ ವೈರಲ್ ಆಗಿದೆ. ಪ್ರಸಿದ್ಧ್ ಕೃಷ್ಣ ಅವರು ತಮ್ಮಅದ್ಭುತ ಯಾರ್ಕರ್‌ನೊಂದಿಗೆ ಕೆಎಲ್ ರಾಹುಲ್ ಅವರನ್ನು ಔಟ್ ಮಾಡುವ ಮೂಲಕ ತಮ್ಮ ಬೌಲಿಂಗ್ ಪರಾಕ್ರಮವನ್ನು ಪ್ರದರ್ಶಿಸಿದರು. ಇದೀಗ ವೈರಲ್ ವಿಡಿಯೋದಲ್ಲಿ ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್ ಪ್ರದರ್ಶನ ಮೆಚ್ಚುಗೆ ಗಳಿಸಿದೆ.
ಕೃಷ್ಣ ಅವರ ಎಸೆತವು ನಿಖರ ಮತ್ತು ಪರಿಪೂರ್ಣ ಪಿಚ್ ಆಗಿದ್ದರಿಂದ ರಾಹುಲ್ ಅವರು ಕಾಲಿನ ಪ್ಯಾಡ್‌ಗೆ ತಗುಲಿತು. ಇದು ಬೌಲರ್ ಪರವಾಗಿ ತೀರ್ಪು ನೀಡಲು ಅಂಪೈರ್ ಯಾವುದೇ ಹಿಂಜರಿಯಲಿಲ್ಲ. ಕೃಷ್ಣ ಅವರ ಬೌಲಿಂಗ್‌ನಿಂದ ಕೆಎಲ್ ರಾಹುಲ್ ಬೇಗನೇ ಫೆವೆಲಿಯನ್ ಕಡೆ ವಾಪಾಸ್ಸಾಗಬೇಕಾಯಿತು.
ಇಂದಿನ ಐಪಿಎಲ್ ಪಂದ್ಯಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟನ್ಸ್ ಮುಖಾಮುಖಿಯಾಗುತ್ತಿದೆ. ಈಗಾಗಲೇ ಬ್ಯಾಟಿಂಗ್ ಮಾಡಿದ ಡಿಸಿ 8 ವಿಕೆಟ್ ಕಳೆದುಕೊಂಡು 203 ರನ್ ಗಳಿಸಿ, ಜಿಟಿಗೆ 204ರನ್‌ಗಳ ಗೆಲುವಿನ ಟಾರ್ಗೇಟ್ ನೀಡಿದೆ.