ಬೆಂಗಳೂರು: ಇಂದು ಕನ್ನಡಿಗ, ಕ್ರಿಕೆಟಿಗ ಕೆಎಲ್ ರಾಹುಲ್ ಹುಟ್ಟುಹಬ್ಬ. ರಾಹುಲ್ ಹುಟ್ಟುಹಬ್ಬಕ್ಕೆ ಶುಭ ಕೋರಿದ ಆರ್ ಸಿಬಿಗೆ ಅಭಿಮಾನಿಗಳು ವಿಶ್ ಮಾಡಕ್ಕಾಗುತ್ತೆ, ಟೀಂಗೆ ತಗೊಳ್ಳಕ್ಕೆ ಆಗಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ಕೆಎಲ್ ರಾಹುಲ್ ಇಂದು 32 ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಮೆಗಾ ಹರಾಜಿನಲ್ಲಿ ಆರ್ ಸಿಬಿ ಅವರನ್ನು ಖರೀದಿಸಲಿದೆ ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಆರ್ ಸಿಬಿ ಮ್ಯಾನೇಜ್ ಮೆಂಟ್ ಅವರನ್ನು ಖರೀದಿಸಲೇ ಇಲ್ಲ. ಇದರಿಂದ ಅಭಿಮಾನಿಗಳಿಗೆ ಮಾತ್ರವಲ್ಲ ಸ್ವತಃ ರಾಹುಲ್ ಗೂ ನಿರಾಸೆಯಾಗಿತ್ತು.
ಬಳಿಕ ರಾಹುಲ್ ರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿಸಿತು. ಇದೀಗ ಡೆಲ್ಲಿ ತಂಡದಲ್ಲಿ ಅವರು ಮ್ಯಾಚ್ ವಿನ್ನರ್ ಆಗಿ ಮಿಂಚುತ್ತಿದ್ದಾರೆ. ಇಂದು ಅವರ ಜನ್ಮದಿನ ನಿಮಿತ್ತ ಆರ್ ಸಿಬಿ ಸೋಷಿಯಲ್ ಮೀಡಿಯಾ ಪುಟದಲ್ಲಿ ಕನ್ನಡದಲ್ಲೇ ವಿಶ್ ಮಾಡಿದೆ. ನೀವು ಯಾವತ್ತೂ ನಮ್ಮ ಹುಡುಗ ಎಂದು ಬರೆದುಕೊಂಡಿದೆ.
ಇದಕ್ಕೆ ಅಭಿಮಾನಿಗಳು ಟಾಂಗ್ ಕೊಟ್ಟಿದ್ದಾರೆ. ಕೆಲವರು ಇದೊಂಥರಾ ಹಳೇ ಗರ್ಲ್ ಫ್ರೆಂಡ್ ಗೆ ವಿಶ್ ಮಾಡಿದ ಹಾಗಾಯ್ತು ಎಂದು ಕಾಲೆಳೆದಿದ್ದಾರೆ. ಮತ್ತೆ ಕೆಲವರು ಮೊನ್ನೆಯಷ್ಟೇ ಆರ್ ಸಿಬಿ ವಿರುದ್ಧ ಗೆದ್ದ ಬಳಿಕ ರಾಹುಲ್ ಚಿನ್ನಸ್ವಾಮಿಯಲ್ಲಿ ಮಾಡಿದ ಸೆಲೆಬ್ರೇಷನ್ ನೆನಪಿಸಿ ಇವನಿಗೆ ಮುಂದೆ ಇದೆ ಹಬ್ಬ ಎಂದು ಕಿಡಿ ಕಾರಿದ್ದಾರೆ.