Select Your Language

Notifications

webdunia
webdunia
webdunia
webdunia

ಬಟ್ಲರ್‌ ಅಬ್ಬರಕ್ಕೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್‌, ಅಗ್ರಸ್ಥಾನದಿಂದ ಕೆಳಗಿಳಿಸಿದ ಗುಜರಾತ್ ಟೈಟಾನ್ಸ್‌

GT vs DC Match Live, Jos Buttler, Gujarat titens

Sampriya

ಬೆಂಗಳೂರು , ಶನಿವಾರ, 19 ಏಪ್ರಿಲ್ 2025 (20:23 IST)
Photo Credit X
ಟೇಬಲ್ ಪಾಯಿಂಟ್ಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ಅನ್ನು ಇಂದು ಸೋಲಿಸಿ, ಗುಜರಾತ್ ಟೈಟಾನ್ಸ್ ಅಗ್ರಸ್ಥಾನಕ್ಕೇರಿತು.

ಟಾಸ್‌ ಗೆದ್ದ ಗುಜರಾತ್ ಟೈಟನ್ಸ್‌ ಮೊದಲು ಫೀಲ್ಡಿಂಗ್ ಆಯ್ದುಕೊಂಡು ಡೆಲ್ಲಿ ಕ್ಯಾಪಿಟಲ್ಸ್‌ ಅನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. 20 ಓವರ್‌ಗಳಲ್ಲಿ ಡಿಸಿ 8 ವಿಕೆಟ್ ಕಳೆದುಕೊಂಡು 203 ರನ್ ಗಳಿಸಿತು. ಗುರಿಬೆನ್ನಟ್ಟಿದ ಗುಜರಾತ್ ಟೈಟನ್ಸ್‌ ಇನ್ನು ನಾಲ್ಕು ಎಸೆತಗಳಿರುವಾಗ ವಿಕೆಟ್ ಕಳೆದುಕೊಂಡು ಜಯ ಗಳಿಸಿತು.

ಜಿಟಿ ಆರಂಭಿಕ ಬ್ಯಾರ್‌ ಜೋಸ್ ಬಟ್ಲರ್ ಅವರು 54 ಎಸೆತಗಳಲ್ಲಿ 97 ರನ್‌ಗಳಿಸಿ ಆಜೇಯವಾಗಿ ಉಳಿದು ಗಮನಸೆಳೆದರು. ಆದರೆ ಸೆಂಚುರಿ ಹಾಕುವ ಸನಿಹದಲ್ಲಿದ್ದ ಬಟ್ಲರ್ ಐಪಿಎಲ್‌ನಲ್ಲಿ ಎಂಟನೇ ಶತಕ ಗಳಿಸುವ ದಾಖಲೆಯನ್ನು ಕಳೆದುಕೊಂಡರು.

ಸಾಯಿ ಸುದರ್ಶನ್ 21 ಎಸೆತಗಳಲ್ಲಿ  36ರನ್, ಶುಭ್‌ಮನ್ ಗಿಲ್‌ 5 ಎಸೆತಗಳಲ್ಲಿ 7ರನ್‌, ಶೆರ್ಫಾನ್‌ 34 ಎಸೆತಗಳಲ್ಲಿ  43ರನ್‌, ತೆವಾಟಿಯಾ 3 ಎಸೆತಗಳಲ್ಲಿ 204 ರನ್ ಗಳಿಸಿದರು.






Share this Story:

Follow Webdunia kannada

ಮುಂದಿನ ಸುದ್ದಿ

GT vs DC Match:ಅಹಮಾದಾಬಾದ್‌ ಬಿಸಿಲ ತಾಪಕ್ಕೆ ಗ್ರೌಂಡ್‌ನಲ್ಲೇ ಸುಸ್ತಾದ ಇಶಾಂತ್ ಶರ್ಮಾ, ಅವಸ್ಥೆ ನೋಡಿ ಗಾಳಿ ಬೀಸಿದ ಸಹ ಆಟಗಾರರು