Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಗುಜರಾತ್ ಟೈಟನ್ಸ್ ಗೆ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಎದುರಾಳಿ

SRH

Krishnaveni K

ಹೈದರಾಬಾದ್ , ಗುರುವಾರ, 16 ಮೇ 2024 (09:19 IST)
ಹೈದರಾಬಾದ್: ಐಪಿಎಲ್ 2024 ರಲ್ಲಿ ಇಂದು ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಗುಜರಾತ್ ಟೈಟನ್ಸ್ ತಂಡ ಔಪಚಾರಿಕ ಪಂದ್ಯವಾಡಲಿದೆ. ಇದು ಲೀಗ್ ಹಂತದಲ್ಲಿ ಗುಜರಾತ್ ಗೆ ಕೊನೆಯ ಪಂದ್ಯವಾಗಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡ ಇದುವರೆಗೆ ಆಡಿದ 12 ಪಂದ್ಯಗಳ ಪೈಕಿ 7 ಗೆಲುವು ಸಾಧಿಸಿದ್ದು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇದೀಗ ಹೈದರಾಬಾದ್ ಗೆ ಪ್ಲೇ ಆಫ್ ಗೇರುವ ಹಂತದಲ್ಲಿ ಚೆನ್ನೈ, ಆರ್ ಸಿಬಿ ಜೊತೆ ಪೈಪೋಟಿ ನಡೆಸಬೇಕಿದೆ. ಆ ನಿಟ್ಟಿನಲ್ಲಿ ಈ ಪಂದ್ಯವನ್ನು ಗೆಲ್ಲಲೇಬೇಕಿದೆ.

ಈ ಕೂಟದ ಎಲ್ಲಾ ಪಂದ್ಯಗಳಲ್ಲಿ ಹೈದರಾಬಾದ್ ಗೆದ್ದಿದ್ದು ಹೊಡೆಬಡಿಯ ಬ್ಯಾಟಿಂಗ್ ನಿಂದಾಗಿ. ಅದರಲ್ಲೂ ಕಳೆದ ಪಂದ್ಯದಲ್ಲಿ ಲಕ್ನೋ ವಿರುದ್ಧ 10 ಓವರ್ ಗಳ ಒಳಗೇ 160 ರನ್ ಚಚ್ಚಿ ದಾಖಲೆ ಮಾಡಿತ್ತು. ಆರಂಭಿಕರಾದ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ ಸ್ಪೋಟಕ ಆರಂಭ ನೀಡುತ್ತಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ಎಷ್ಟೇ ದೊಡ್ಡ ಮೊತ್ತವಾದರೂ ಈ ಇಬ್ಬರು ದಾಂಡಿಗರು ಅದನ್ನು ಚಚ್ಚಿ ಹಾಕಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಇನ್ನೊಂದೆಡೆ ಗುಜರಾತ್ ಟೈಟನ್ಸ್ ಗೆ ಇದು ಕೊನೆಯ ಲೀಗ್ ಪಂದ್ಯ. ಈ ಐಪಿಎಲ್ ನಲ್ಲಿ ಗುಜರಾತ್ ಸಾಧನೆ ಕಳಪೆಯಾಗಿತ್ತು. ಆಡಿದ 13 ಪಂದ್ಯಗಳಲ್ಲಿ 5 ಗೆಲುವು ಕಂಡಿರುವ ಗುಜರಾತ್ ಈಗಾಗಲೇ ಪ್ಲೇ ಆಫ್ ರೇಸ್ ನಿಂದ ಹೊರಬಿದ್ದಿದೆ. ಹೀಗಾಗಿ ಈ ಪಂದ್ಯ ಶುಬ್ಮನ್ ಗಿಲ್ ಪಡೆಗೆ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯವಾಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ರಾಜಸ್ಥಾನ್ ರಾಯಲ್ಸ್ ಗೆ ಸತತ ನಾಲ್ಕನೇ ಸೋಲು