Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಆರ್ ಸಿಬಿಗೆ ಮಹತ್ವದ ಪಂದ್ಯದಲ್ಲಿದೆ 18 ರ ನಂಟು

RCB

Krishnaveni K

ಬೆಂಗಳೂರು , ಬುಧವಾರ, 15 ಮೇ 2024 (11:29 IST)
ಬೆಂಗಳೂರು: ಕೊನೆಯ ಲೀಗ್ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈಗ 18 ಸಂಖ್ಯೆ ಮ್ಯಾಜಿಕ್ ನಂಬರ್ ಆಗಿ ಕಾಣುತ್ತಿದೆ.

ಮೇ 18 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆರ್ ಸಿಬಿ ಮಹತ್ವದ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಭರ್ಜರಿ ಗೆಲುವು ಕಂಡರೆ ಆರ್ ಸಿಬಿಗೆ ಪ್ಲೇ ಆಫ್ ಗೇರಬಹುದಾಗಿದೆ. ಸತತ ಐದು ಗೆಲುವು ಕಂಡಿರುವ  ಆರ್ ಸಿಬಿ ಈಗ ಮತ್ತೊಂದು ಗೆಲುವಿನ ಉತ್ಸಾಹದಲ್ಲಿದೆ.

ಆದರೆ ಈ ಪಂದ್ಯದಲ್ಲಿ ಆರ್ ಸಿಬಿಗೆ ಮ್ಯಾಜಿಕ್ ನಂ.18 ಆಗಿದೆ. ಆರ್ ಸಿಬಿ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೆರ್ಸಿ 18. ಈ ಪಂದ್ಯದಲ್ಲಿ ಆರ್ ಸಿಬಿ ಪ್ಲೇ ಆಫ್ ಗೇರಲು 18 ಓವರ್ ಗಳಲ್ಲಿ ಗೆಲ್ಲಬೇಕು ಅಥವಾ 18 ರನ್ ಗಳ ಅಂತರದಲ್ಲಿ ಗೆಲ್ಲಬೇಕು. ಪಂದ್ಯ ನಡೆಯುವ ದಿನವೂ 18 ಆಗಿದೆ. ಹೀಗಾಗಿ 18 ಅದೃಷ್ಟ ಸಂಖ್ಯೆ ಎಂದೇ ಎಲ್ಲರೂ ನಂಬಿದ್ದಾರೆ.

ಕೆಲವರು ಈ ಪಂದ್ಯವನ್ನು ಮಹಾಭಾರತ ಯುದ್ಧಕ್ಕೆ ಹೋಲಿಸಿದ್ದಾರೆ. ಮಹಾಭಾರತ ಯುದ್ಧ ನಡೆದಿದ್ದು 18 ದಿನ. ಈಗ ಆರ್ ಸಿಬಿಗೂ ಬೇಕಾಗಿರುವುದು 18 ಸಂಖ್ಯೆ. ಹೀಗಾಗಿ ಈ ಬಾರಿ ನಾವು ಕಪ್ ಗೆದ್ದೇ ಗೆಲ್ಲುತ್ತೇವೆ ಎಂದು ಆರ್ ಸಿಬಿ ಫ್ಯಾನ್ಸ್ ವಿಶ್ವಾಸದಲ್ಲಿದ್ದಾರೆ. ಸತತ ಸೋಲು ಕಾಣುತ್ತಿದ್ದ ಆರ್ ಸಿಬಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಹೀನಾಯವಾಗಿ ಲೀಗ್ ಹಂತದಲ್ಲೇ ನಿರ್ಗಮಿಸಬಹುದು ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಸತತ ಐದು ಪಂದ್ಯಗಳನ್ನು ಗೆದ್ದು ಸ್ಪೂರ್ತಿದಾಯಕ ಕಮ್ ಬ್ಯಾಕ್ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ಔಟಾಗಿದ್ದಕ್ಕೆ ನಕ್ಕ ಸಂಜೀವ್ ಗೊಯೆಂಕಾ