Select Your Language

Notifications

webdunia
webdunia
webdunia
Thursday, 10 April 2025
webdunia

IPL 2025: ಕನ್ನಡಿಗ ಆಟಗಾರನ ನೆರವಿನಿಂದ ಗುಜರಾತ್ ಟೈಟನ್ಸ್ ವಿರುದ್ಧ ರೋಚಕ ಗೆಲುವು ಕಂಡ ಪಂಜಾಬ್ ಕಿಂಗ್ಸ್

Punjab Kings

Krishnaveni K

ಅಹಮ್ಮದಾಬಾದ್ , ಬುಧವಾರ, 26 ಮಾರ್ಚ್ 2025 (09:04 IST)
Photo Credit: X
ಅಹಮ್ಮದಾಬಾದ್: ಐಪಿಎಲ್ 2025 ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡ ಕನ್ನಡಿಗ ಆಟಗಾರನ ಸಹಾಯದಿಂದ ರೋಚಕ 11 ರನ್ ಗಳ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಶ್ರೇಯಸ್ ಅಯ್ಯರ್ ಅಜೇಯ 97 ಮತ್ತು ಶಶಾಂಕ್ ಸಿಂಗ್ 44 ರನ್ ಗಳಿಸಿದರು. ಇವರಿಬ್ಬರ ಸಿಡಿಲಬ್ಬರದ ಬ್ಯಾಟಿಂಗ್ ನಿಂದಾಗಿ ಪಂಜಾಬ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿತು.

ಇದಕ್ಕೆ ಉತ್ತರವಾಗಿ ಗುಜರಾತ್ ಕೂಡಾ ಭರ್ಜರಿ ಬ್ಯಾಟಿಂಗ್ ನಡೆಸಿತು. ಸಾಯಿ ಸುದರ್ಶನ್ 74, ಜೋಸ್ ಬಟ್ಲರ್ 53, ರುದರ್ ಫೋರ್ಡ್ 46 ರನ್ ಗಳಿಸಿ ತಂಡಕ್ಕೆ ನೆರವಾದರು. ಒಂದು ಹಂತದಲ್ಲಿ ಗುಜರಾತ್ ಈ ಮೊತ್ತವನ್ನೂ ಬೆನ್ನಟ್ಟಬಹುದೇನೋ ಎಂಬ ಸ್ಥಿತಿಯಿತ್ತು. ಆದರೆ ಅಂತಿಮವಾಗಿ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಲಷ್ಟೇ ಶಕ್ತವಾಯಿತು.

ಇದಕ್ಕೆ ಕಾರಣವಾಗಿದ್ದು ಕನ್ನಡಿಗ ವೈಶಾಖ್ ವಿಜಯ್ ಕುಮಾರ್. ಕೊನೆಯ 6 ಓವರ್ ಗಳಿರುವಾಗ ಇಂಪ್ಯಾಕ್ಟ್ ಪ್ಲೇಯರ್ ಆಗಿ ವೈಶಾಖ್ ಕಣಕ್ಕಿಳಿದರು. 15 ನೇ ಓವರ್ ಎಸೆದ ವೈಶಾಖ್ ಕೇವಲ 5 ರನ್ ನೀಡಿದರು. ಮತ್ತೆ 17 ನೇ ಓವರ್ ಎಸೆದು ಕೇವಲ 5 ರನ್ ನೀಡಿದರು. ನಿರ್ಣಾಯಕ ಹಂತದಲ್ಲಿ ಈ ಬಿಗುವಿನ ಓವರ್ ನಿಂದಾಗಿ ಪಂಜಾಬ್ ಗೆಲುವು ಸುಲಭವಾಯಿತು.


Share this Story:

Follow Webdunia kannada

ಮುಂದಿನ ಸುದ್ದಿ

IPL 2025: ದುಬಾರಿ ಮೊತ್ತಕ್ಕೆ ಖರೀದಿಯಾದ ಶ್ರೇಯಸ್ ಅಯ್ಯರ್ ಮೊದಲ ಬ್ಯಾಟಿಂಗ್‌ಗೆ ಎಲ್ಲರೂ ಫಿದಾ