ವಿಶಾಖಪಟ್ಟಣ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಿನ್ನೆಯ ಐಪಿಎಲ್ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಲು ನೆರವಾದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಗ ಆಶುತೋಷ್ ಶರ್ಮಾ ಕಳೆದ ಮೆಗಾ ಹರಾಜಿನಲ್ಲಿ ಆರ್ ಸಿಬಿ ಪಾಲಾಗಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಕೈ ತಪ್ಪಿದ್ದು ಹೇಗೆ?
ಮಧ್ಯಪ್ರದೇಶ ಮೂಲದವರಾದ 26 ವರ್ಷದ ಆಶುತೋಷ್ ಶರ್ಮಾ ಈ ಮೊದಲು ಪಂಜಾಬ್ ಕಿಂಗ್ಸ್ ಪರ ಐಪಿಎಲ್ ಆಡಿದ್ದರು. ಅಲ್ಲಿ ತಕ್ಕಮಟ್ಟಿಗೆ ಗುರುತಿಸಿಕೊಂಡಿದ್ದ ಆಶುತೋಷ್ ಈ ಬಾರಿ ಹರಾಜಿಗೊಳಗಾಗಿದ್ದರು.
ಮೆಗಾ ಹರಾಜಿನ ವೇಳೆ ಆಶುತೋಷ್ ಹೆಸರು ಬಂದಾಗ ಮೊದಲು ಆರ್ ಸಿಬಿ ಬಿಡ್ಡಿಂಗ್ ಮಾಡಿತ್ತು. ಆದರೆ ಬಳಿಕ ಡೆಲ್ಲಿಯೂ ಸ್ಪರ್ಧೆಗೆ ಇಳಿಯುತ್ತಿದ್ದಂತೇ ಆಶುತೋಷ್ ಬೆಲೆ ಹೆಚ್ಚಾಯ್ತು. ಆಗ ಆರ್ ಸಿಬಿ ಬಿಡ್ಡಿಂಗ್ ನಿಂದ ಹಿಂದೆ ಸರಿಯಿತು.
ಕೊನೆಗೆ ಆರ್ ಸಿಬಿ ದೇವದತ್ತ ಪಡಿಕ್ಕಲ್ ರನ್ನು ಆ ಸ್ಥಾನಕ್ಕೆ ಖರೀದಿ ಮಾಡಿತು. ವಿಶೇಷವೆಂದರೆ ಮೊದಲ ಪಂದ್ಯದಲ್ಲೇ ದೇವದತ್ತ್ ಪಡಿಕ್ಕಲ್ ವಿಫಲರಾದರು. ಆದರೆ ಆಶುತೋಷ್ ಡೆಲ್ಲಿ ಪಾಲಾಗಿ ಮೊದಲ ಪಂದ್ಯದಲ್ಲೇ ಮಿಂಚಿದರು.