ಅಹಮ್ಮದಾಬಾದ್: ಐಪಿಎಲ್ 2025 ರ ಇಂದಿನ ಡೆಲ್ಲಿ ಕ್ಯಾಪಿಟಲ್ಸ್ ವರ್ಸಸ್ ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಯುವ ಕ್ರಿಕೆಟಿಗನಿಗೆ ಹಿರಿಯ ವೇಗಿ ಇಶಾಂತ್ ಶರ್ಮಾ ನಿಂದು ಎಷ್ಟಿದೆಯೋ ನೋಡ್ಕೋ ಎನ್ನುವಂತೆ ಗದರಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇಂದಿನ ಪಂದ್ಯದಲ್ಲಿ ಗುಜರಾತ್ ತಂಡ ಡೆಲ್ಲಿಯನ್ನು 7 ವಿಕೆಟ್ ಗಳಿಂದ ಮಣಿಸಿದೆ. ಆದರೆ ಡೆಲ್ಲಿ ಬ್ಯಾಟಿಂಗ್ ವೇಳೆ ಗುಜರಾತ್ ಪರ ಆಡುವ ಹಿರಿಯ ವೇಗಿ ಇಶಾಂತ್ ಶರ್ಮಾ ಮತ್ತು ಡೆಲ್ಲಿ ಯುವ ಬ್ಯಾಟಿಗ ಆಶುತೋಷ್ ನಡುವೆ ಜಗಳ ನಡೆದಿದೆ.
ಪಂದ್ಯದ 19 ನೇ ಓವರ್ ನಲ್ಲಿ ಇಶಾಂತ್ ಬೌಲಿಂಗ್ ನಲ್ಲಿ ಆಶುತೋಷ್ ವಿರುದ್ಧ ಕ್ಯಾಚ್ ಔಟ್ ಗೆ ಮನವಿ ಸಲ್ಲಿಕೆಯಾಯಿತು. ಆದರೆ ಅಂಪಾಯರ್ ನೀಡಲಿಲ್ಲ. ಇತ್ತ ಗುಜರಾತ್ ಬಳಿಯೂ ಎಲ್ಲಾ ಡಿಆರ್ ಎಸ್ ಕೋಟ ಮುಗಿದಿತ್ತು. ಹೀಗಾಗಿ ಇಶಾಂತ್ ಹತಾಶೆಯಿಂದ ಆಶುತೋಷ್ ಮೇಲೆ ಕೂಗಾಡಿದ್ದಾರೆ.
ಈ ವೇಳೆ ಆಶುತೋಷ್ ತಾಳ್ಮೆ ಕಳೆದುಕೊಳ್ಳದೇ ಹಿರಿಯ ಆಟಗಾರನಿಗೆ ಬಾಲ್ ನನ್ನ ಭುಜಕ್ಕೆ ತಗುಲಿದ್ದು ಎಂದು ತಿಳಿಹೇಳಲು ಪ್ರಯತ್ನಿಸಿದರು. ಆದರೆ ಇಶಾಂತ್ ಕೋಪಗೊಳ್ಳುತ್ತಲೇ ಅಲ್ಲಿಂದ ತೆರಳಿದರು.