ಮುಂಬೈ: ಸತತ ಸೋಲುಗಳಿಂದ ಕಂಗೆಟ್ಟು ಇದೀಗ ಗೆಲುವಿನ ಹಾದಿಗೆ ಮರಳಿರುವ ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಇಂದು ಮುಖಾಮುಖಿಯಾಗಲಿದೆ. ಇದುವರೆಗೂ ನಡೆದ 6 ಪಂದ್ಯಾಟಗಳಲ್ಲಿ ಎಂಐ ಹಾಗೂ ಎಸ್‌ಆರ್‌ಎಚ್ ತಲಾ ಎರಡರಲ್ಲಿ ಮಾತ್ರ ಗೆದ್ದು ಬೀಗಿದೆ.
ಸತತ ಸೋಲುಗಳಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್ ಕಳೆದ ಪಂದ್ಯಾಟದಲ್ಲಿ ಕೆಕೆಆರ್ ವಿರುದ್ಧ ಗೆದ್ದು ಬೀಗಿತ್ತು. ಇನ್ನೂ ಹ್ಯಾಟ್ರಿಕ್ ಸೋಲಿನಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಹೈದರಾಬಾದ್ ಕಳೆದ ಪಂದ್ಯಾಟದಲ್ಲಿ ಪಂಜಾಬ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತ್ತು. ಎರಡೂ ತಂಡಗಳಿಗೂ ಇಂದಿನ ಪಂದ್ಯಾಟ ಪ್ರಮುಖವಾಗಿದೆ.
IPL 2025 ರಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡಗಳಿಗೆ ವಾಂಖೆಡೆ ಸ್ಟೇಡಿಯಂ ಸ್ಪಷ್ಟ ಪ್ರಯೋಜನವನ್ನು ತೋರಿಸಿದೆ ಎಂದು ಸಮಗ್ರ ಸ್ಥಳ ವಿಶ್ಲೇಷಣೆಯು ಬಹಿರಂಗಪಡಿಸುತ್ತದೆ. ಪಿಚ್ ಸಾಮಾನ್ಯವಾಗಿ ಉದ್ದಕ್ಕೂ ಅತ್ಯುತ್ತಮ ಬ್ಯಾಟಿಂಗ್ ಪರಿಸ್ಥಿತಿಗಳನ್ನು ನೀಡುತ್ತದೆ, ಆದರೆ ಈ ಋತುವಿನಲ್ಲಿ ಈ ಸ್ಥಳದಲ್ಲಿ 75% ಗೆಲುವಿನ ದರದೊಂದಿಗೆ ಗುರಿಗಳನ್ನು ನಿಗದಿಪಡಿಸುವ ತಂಡಗಳು ಹೆಚ್ಚು ಯಶಸ್ವಿಯಾಗಿದೆ ಎನ್ನಲಾಗಿದೆ. ಈ ಹಿನ್ನೆಲೆ ಟಾಸ್ ಗೆದ್ದು, ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವ ತಂಡ ಗೆಲುವಿನ ನಗೆ ಬೀರುವ ಸಾಧ್ಯತೆ ಜಾಸ್ತಿಯಿದೆ.